ಮುಂಬರುವ ಐಪಿಎಲ್ನಿಂದ ಪ್ರತಿ ಪಂದ್ಯವನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಸ್ತವವಾಗಿ ಐಪಿಎಲ್ನಲ್ಲಿ ಇದುವರೆಗೆ ನಡೆದಿರುವ 17 ಆವೃತ್ತಿಗಳಲ್ಲಿ ಆಟಗಾರರಿಗೆ ಯಾವುದೇ ಪಂದ್ಯ ಶುಲ್ಕವನ್ನು ನೀಡುತ್ತಿರಲಿಲ್ಲ. ಬದಲಿಗೆ ಹರಾಜಿನಲ್ಲಿ ಯಾವ ಆಟಗಾರ, ಯಾವ ತಂಡಕ್ಕೆ, ಎಷ್ಟು ಮೊತ್ತಕ್ಕೆ ಹರಾಜುಗುತ್ತಿದ್ದನೋ, ಅಷ್ಟು ಮೊತ್ತವನ್ನು ಫ್ರಾಂಚೈಸಿ ಕಡೆಯಿಂದ ವೇತನವಾಗಿ ಪಡೆಯುತ್ತಿದ್ದ. ಅದನ್ನು ಬಿಟ್ಟರೆ ಪಂದ್ಯದಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ವಿವಿಧ ಪ್ರಶಸ್ತಿಗಳ ರೂಪದಲ್ಲಿ ಆಟಗಾರರಿಗೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತಿತ್ತು. ಉಳಿದಂತೆ ಬಿಸಿಸಿಐ ವತಿಯಿಂದ ಯಾವುದೇ ರೀತಿಯ ವೇತನ ಆಟಗಾರರಿಗೆ ಸಿಗುತ್ತಿರಲಿಲ್ಲ. ಆದರೀಗ ಜಯ್ ಶಾ ನೀಡಿರುವ ಹೇಳಿಕೆಯ ಪ್ರಕಾರ, ಮುಂದಿನ ಆವೃತ್ತಿಯಿಂದ ಐಪಿಎಲ್ನಲ್ಲಿ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂಗಳನ್ನು ನೀಡಲಾಗುತ್ತದೆ.