ಬೆಂಡೆಕಾಯಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅನೇಕ ಮನೆಗಳಲ್ಲಿ ಬೆಂಡೆಕಾಯಿಯನ್ನು ಪಲ್ಯ, ಸಾಂಬಾರ್, ಗೊಜ್ಜು, ಕರಿ, ಬೆಂಡೆಕಾಯಿ ಬಜ್ಜಿ, ಬೆಂಡೆಕಾಯಿ ಕಬಾಬ್ ಹೀಗೆ ನಾನಾ ರೀತಿಯ ಖಾದ್ಯಗಳನ್ನು ಬೆಂಡೆಕಾಯಿಯಿಂದ ತಯಾರಿಸುತ್ತಾರೆ. ಈ ಎಲ್ಲಾ ತಿಂಡಿಗಳು ಸಖತ್ ಟೇಸ್ಟಿ ಆಗಿರುತ್ತದೆ. ಬೆಂಡೆಕಾಯಿ ಇಷ್ಟಪಡುವವರಂತೂ ಬಾಯಿ ಚಪ್ಪರಿಸಿಕೊಂಡು ಇವುಗಳನ್ನು ತಿನ್ನುತ್ತಾರೆ.
ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ: ಅಕ್ರಮ ಅಂಗಡಿ-ಮುಂಗಟ್ಟುಗಳು ನೆಲಸಮ!
ಆದರೆ ಬೆಂಡೆಕಾಯಿ ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಇದರ ಸಂಯುಕ್ತಗಳು ಅಧಿಕ ತೂಕ ಹೊಂದಿರುವವರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಈ ತರಕಾರಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳಿದ್ದರೂ ಬೆಂಡೆಕಾಯಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಅದರಲ್ಲೂ ಕೆಲ ಸಮಸ್ಯೆಗಳಿಂದ ಬಳಲುತ್ತಿರುವವರು ಈ ತರಕಾರಿಯನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಎಂತಹವರು ಬೆಂಡೆಕಾಯಿಯನ್ನು ತಿನ್ನಬಾರದು ಎಂದು ನೋಡೋಣ ಬನ್ನಿ
ಬೆಂಡೆಕಾಯಿ ಅಲರ್ಜಿ: ಬೆಂಡೆಕಾಯಿ ಲೆಕ್ಟಿನ್ ಎಂಬ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಕೆಲವರಿಗೆ ಅಲರ್ಜಿಯನ್ನು ಉಂಟು ಮಾಡಬಹುದು. ಬೆಂಡೆಕಾಯಿ ಸೇವನೆಯಿಂದ ನಿಮಗೆ ಯಾವುದಾದರೂ ಅಡ್ಡ ಪರಿಣಾಮಗಳಿದ್ದರೆ, ಈ ತರಕಾರಿಯನ್ನು ಆಹಾರದಲ್ಲಿ ಸೇರಿಸದಿರುವುದು ಉತ್ತಮ. ಇಲ್ಲದಿದ್ದರೆ ತುರಿಕೆ, ಊತ, ಉಸಿರಾಟದ ತೊಂದರೆ ಅಥವಾ ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬರಬಹುದು.
ಜೀರ್ಣಕ್ರಿಯೆ ಸಮಸ್ಯೆಗಳು: ಬೆಂಡೆಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ಕೆಲವು ಜನರಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು. ಮಲಬದ್ಧತೆ ಅಥವಾ ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವವರು ಬೆಂಡೆಕಾಯಿಯನ್ನು ಸೇವಿಸಿದರೆ ಈ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.
ಸಕ್ಕರೆ ಮಟ್ಟಗಳು: ಸಕ್ಕರೆ ರೋಗಿಗಳು ಬೆಂಡೆಕಾಯಿಯನ್ನು ತಿನ್ನಬಾರದು. ಈ ತರಕಾರಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಘಟಕಗಳನ್ನು ಒಳಗೊಂಡಿದೆ. ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುವ ಮತ್ತು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಹೊಂದಿರದ ಜನರು ವೈದ್ಯಕೀಯ ಸಲಹೆಯಿಲ್ಲದೆ ಬೆಂಡೆಕಾಯಿಯನ್ನು ಸೇವಿಸುವ ಅಪಾಯವನ್ನು ಹೊಂದಿರುತ್ತಾರೆ
ಗರ್ಭಿಣಿ ಮತ್ತು ಬಾಣಂತಿಯರು: ಗರ್ಭಿಣಿಯರು ಮತ್ತು ಬಾಣಂತಿಯರು ಆಹಾರದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಬೆಂಡೆಕಾಯಿಯನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಕಿಡ್ನಿ ಸ್ಟೋನ್: ಕಿಡ್ನಿ ಸ್ಟೋನ್ ಇದ್ದರೆ ಬೆಂಡೆಕಾಯಿಯನ್ನು ತಿನ್ನಲೇಬಾರದು. ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ