ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರ ಮುಖದಲ್ಲಿ ಸಂತಸವನ್ನು ತಂದಿದೆ. ಕೋಳಿಯ ಆಹಾರ ಸೇರಿದಂತೆ ಕೆಲವು ಉದ್ಯಮಗಳಿಗೆ ಮಾತ್ರವೇ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ.
ಒಂದು ಕ್ವಿಂಟಲ್ ಮೆಕ್ಕೆಜೋಳವು ಕೊಪ್ಪಳ ಮಾರುಕಟ್ಟೆಯಲ್ಲಿ 2,950 ರೂಪಾಯಿಗೆ ಮಾರಾಟವಾಗಿದ್ದು, ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲದ ಬೆಲೆಯನ್ನು ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರವು 2330 ರೂ. ಬೆಂಬಲ ಬೆಲೆಯನ್ನು ಘೋಷಿಸಿದ್ದು, ಇದಕ್ಕಿಂತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ.
Condoms: ಸೆಕ್ಸ್ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು ಗೊತ್ತಾ..?
ಸಾಮಾನ್ಯವಾಗಿ ಮೆಕ್ಕೆಜೋಳ ಬೆಲೆ 2 ಸಾವಿರ ರೂಪಾಯಿ ಆಸುಪಾಸಿನಲ್ಲಿರುತ್ತಿತ್ತು. ರಾಜ್ಯದ 10 ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆ ಮಾಡಲು ಅನುಮತಿಯನ್ನು ನೀಡಿದ್ದು, ಪ್ರತಿನಿತ್ಯ 70 ಸಾವಿರ ಕ್ವಿಂಟಲ್ ಮೆಕ್ಕೆಜೋಳವು ಬೇಕಾಗಬಹುದು ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಹಿಂದಿಗಿಂತಲೂ ಉತ್ತಮವಾದ ದರವು ಬಂದಿದೆ. ಬೇರೆ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಲೆಯನ್ನು ನಿಯಂತ್ರಣ ಮಾಡಲಾಗಿದೆ. 2700 ರಿಂದ 2950 ರೂಪಾಯಿಗೆ ಮೆಕ್ಕೆಜೋಳವು ಮಾರಾಟವಾಗುತ್ತಿದೆ. ಕೋಳಿ ಸಾಕಾಣಿಕೆಗೆ ಮೆಕ್ಕೆಜೋಳವೇ ಪ್ರಮುಖವಾದ ಆಹಾರವಾಗಿದ್ದು, ಬೆಲೆ ಏರಿಕೆಯಿಂದ ಮೊಟ್ಟೆ, ಕೋಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.