ಕೆಲವರು ತಮ್ಮ ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ವೈದ್ಯರು ಅಥವಾ ಸೌಂದರ್ಯ ಸಲಹೆಗಾರರನ್ನು ಭೇಟಿ ಮಾಡುತ್ತಾರೆ.ಇದೆಲ್ಲದರ ನಡುವೆ ಚರ್ಮದ ತಾರುಣ್ಯವನ್ನು ಕಾಪಾಡಿಕೊಳ್ಳಲು ವಿಜ್ಞಾನದಲ್ಲಿ ಕೂಡ ಕೆಲವು ಸಲಹೆ ಮತ್ತು ವಿಧಾನಗಳನ್ನು ತಿಳಿಸಲಾಗಿದೆ.
ನನಗೆ ಪ್ರಧಾನಿ ಹುದ್ದೆ ಮೇಲೆ ಆಸೆ ಇಲ್ಲ: ವಿಪಕ್ಷಗಳು ಕೊಟ್ಟಿದ್ದ ಆಫರ್ ಬಹಿರಂಗಪಡಿಸಿದ ಗಡ್ಕರಿ!
ನಮ್ಮ ಆಹಾರ ಪದ್ಧತಿ , ಕೂದಲು ಮತ್ತು ಚರ್ಮದ ಆರೈಕೆಯ ವಿಧಾನಗಳು ಮತ್ತು ನಾವು ಮಾಡುವಂತಹ ಕೆಲವು ಸಾಮಾನ್ಯ ತಪ್ಪುಗಳು ಚರ್ಮದ ಅಕಾಲಿಕ ವಯಸ್ಸಾಗುವ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಹಾಗಾಗಿ ನೀವು ಕೂಡ ಚರ್ಮದ ತಾರುಣ್ಯವನ್ನು ಕಾಪಾಡಲು ಪ್ರಯತ್ನಿಸುತ್ತಿದ್ದರೆ ಮೊದಲು ವಯಸ್ಸಾಗಲು ವೈಜ್ಞಾನಿಕ ಕಾರಣವೇನು? ನಾವು ಮಾಡುವಂತಹ ಯಾವ ತಪ್ಪುಗಳಿಂದ ಚರ್ಮಕ್ಕೆ ಬೇಗ ವಯಸ್ಸಾಗುತ್ತದೆ.? ಮತ್ತು ಅದನ್ನು ನಿಧಾನಗೊಳಿಸಲು ಮಾಡಬೇಕಾದ ಕ್ರಮಗಳೇನು? ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ಚರ್ಮದ ಯೌವನದ ಹಿಂದಿನ ವೈಜ್ಞಾನಿಕ ಕಾರಣಗಳು
ವಯಸ್ಸಾದಂತೆ ಎಲ್ಲರ ಚರ್ಮದಲ್ಲಿ ನೆರಿಗೆಗಳು, ಗೆರೆಗಳು ಮೂಡುವುದು ಸಹಜ. ಹಾಗೇ ಇದು ನಮ್ಮ ಜೀವನಶೈಲಿ, ಪರಿಸರ ಮತ್ತು ಆನುವಂಶಿಕ ಮುಂತಾದ ಅಂಶಗಳಿಂದ ಪ್ರಭಾವಿತವಾಗುತ್ತದೆ. ದೇಹದಲ್ಲಿ ಅತಿದೊಡ್ಡ ಅಂಗವಾದ ಚರ್ಮದಲ್ಲಿ ಸಮಯ ಕಳೆದಂತೆ ಕೆಲವು ನಿರ್ದಿಷ್ಟ ಬದಲಾವಣೆಗಳಾಗುತ್ತದೆ.
ಉದಾಹರಣೆಗೆ ಚರ್ಮದಲ್ಲಿ ತೈಲ ಉತ್ಪಾದನೆ ಕಡಿಮೆಯಾಗುವುದು, ಜೀವಕೋಶದ ವಹಿವಾಟು ಕಡಿಮೆಯಾಗುವುದು ಮತ್ತು ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಚರ್ಮದಲ್ಲಿ ನೆರಿಗೆಗಳು, ಮಂದ ಚರ್ಮ ಮತ್ತು ಸೂಕ್ಷ್ಮ ಗೆರೆಗಳು ಮೂಡುತ್ತದೆ.
ಅಕಾಲಿಕ ವಯಸ್ಸಾಗಲು ನೀವು ಮಾಡುವಂತಹ ಸಾಮಾನ್ಯ ತಪ್ಪುಗಳು
ಧೂಮಪಾನವು ವಯಸ್ಸಾಗುವುದನ್ನು ವೇಗಗೊಳಿಸುತ್ತದೆ: ಕೆಲವರಿಗೆ ಧೂಮಪಾನ ಮಾಡುವ ಚಟವಿರುತ್ತದೆ. ಧೂಮಪಾನವು ದೇಹದಲ್ಲಿ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದು ಚರ್ಮಕ್ಕೆ ಸರಿಯಾದ ಪೋಷಕಾಂಶಗಳು ಸಿಗದಂತೆ ತಡೆಯುತ್ತದೆ ಮತ್ತು ಆಮ್ಲಜನಕದ ಪೂರೈಕೆ ಕೂಡ ಕಡಿಮೆ ಮಾಡುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗುವ ಮೂಲಕ ಬೇಗ ವಯಸ್ಸಾಗುತ್ತದೆ. ಧೂಮಪಾನ ಚಟವನ್ನು ನಿಲ್ಲಿಸಿದರೆ ಚರ್ಮದ ಕಾಂತಿ ಮತ್ತು ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ.
ಆಲ್ಕೋಹಾಲ್ನ ಅತಿಯಾದ ಸೇವನೆ:
ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸುವುದರಿಂದ ಇದು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ. ಹಾಗಾಗಿ ಚರ್ಮದ ಆರೋಗ್ಯವನ್ನು ಕಾಪಾಡಲು, ಕಡಿಮೆ ಆಲ್ಕೋಹಾಲ್ ಸೇವನೆ ಮಾಡಿ ಮತ್ತು ನೀರು ಅಥವಾ ಹರ್ಬಲ್ ಟೀಗಳಂತಹ ಹೈಡ್ರೇಟಿಂಗ್ ಪಾನೀಯಗಳನ್ನು ಹೆಚ್ಚು ಕುಡಿಯಲು ಅಭ್ಯಾಸ ಮಾಡಿಕೊಳ್ಳಿ.