ಬೆಂಗಳೂರು:- ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳ ಅಂತ್ಯಗೊಂಡರೂ ಗೃಹಲಕ್ಷ್ಮಿ ಹಣ ಮಾತ್ರ ಲಕ್ಷ್ಮಿಯರ ಖಾತೆಯನ್ನ ಸೇರಿಲ್ಲ. ಇದು ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್ – RTI ಕಾರ್ಯಕರ್ತ ಸ್ಪಷ್ಟನೆ!
ಇದಕ್ಕೆ ಕಾರಣ ನೋಡುವುದಾದರೆ, ‘ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗಿಲ್ಲ. ಸಧ್ಯ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ ಕೇಳಿದ್ದು, ಒಂದೊಂದೆ ತಿಂಗಳ ಹಣವನ್ನ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿಗೆ 2500 ಕೋಟಿ ಹಣ ಬೇಕಾಲಿದೆ. ಇನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮೂರು ತಿಂಗಳ ಅನುದಾನ ಅಂದರೆ ಒಟ್ಟು 7500 ಕೋಟಿ ಹಣ ಬಿಡುಗಡೆಗೆ ಪತ್ರ ಬರೆದಿದ್ದು, ಸಧ್ಯ ಈ ಹಣವೂ ಬಾಕಿ ಉಳಿದೆದೆ.
ಇನ್ನು ಪ್ರತಿ ತಿಂಗಳು 1.21 ಕೋಟಿ ರೂ. ಗೃಹಲಕ್ಷ್ಮಿ ಹಣ ಬಿಡುಗಡೆ ಆಗಬೇಕು. ಆದ್ರೆ, ಇಲಾಖೆ ಹಣ ಬಿಡುಗಡೆ ಮಾಡದ ಕಾರಣ ಈ ತಿಂಗಳು ಗೃಹಲಕ್ಷ್ಮಿ ಹಣ ಬರುವುದು ಡೌಟ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಬಂದಿತ್ತು. ಈ ತಿಂಗಳು ಜುಲೈ ತಿಂಗಳ ಹಣ ಬರುತ್ತೆ ಎಂದುಕೊಂಡವರಿಗೆ ಶಾಕ್ ಆಗಿದ್ದು, ಮುಂದಿನ ತಿಂಗಳಾದರೂ ಹಣ ಹಾಕುತ್ತಾರಾ ಕಾದುನೋಡಬೇಕಿದೆ