ಪ್ರತಿ ದಿನ ಸರಿಯಾಗಿ ನಿದ್ರೆ ಮಾಡದ ಜನರನ್ನು ಗಮನದಲ್ಲಿಟ್ಟುಕೊಂಡು ಸ್ಲೀಪ್ ಇಂಟರ್ನ್ಶಿಪ್ ರೂಪಿಸಲಾಗಿದೆ. ಸ್ಪರ್ಧಿಗಳಿಗೆ ಪ್ರತಿ ದಿನ 8 -9 ಗಂಟೆ ನಿದ್ರೆ ಮಾಡುವ ಟಾಸ್ಕ್ ನೀಡಲಾಗುತ್ತದೆ. ಸಾಯಿಶ್ವರಿ ಪಾಟೀಲ್ ಸೇರಿದಂತೆ 12 ಸ್ಪರ್ಧಿಗಳಿಗೆ ಮಲಗಲು ಉತ್ತಮ ಬೆಡ್ ನೀಡಲಾಗಿತ್ತು. ಸ್ಪರ್ಧಿಗಳ ನಿದ್ರೆಯನ್ನು ಟ್ರ್ಯಾಕ್ ಮಾಡಲು ಸ್ಲೀಪ್ ಟ್ರ್ಯಾಕರ್ ಹಾಕಲಾಗಿತ್ತು.
8 -9 ಗಂಟೆ ಹೇಗೆ ಒಳ್ಳೆ ನಿದ್ರೆ ಮಾಡ್ಬೇಕು ಎನ್ನುವ ಬಗ್ಗೆ ತಜ್ಞರಿಂದ ಸ್ಪರ್ಧಿಗಳಿಗೆ ತರಬೇತಿ ಕೂಡ ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಸಮಸ್ಯೆಯನ್ನು ತಜ್ಞರ ಮುಂದೆ ಹೇಳಿದ್ದಲ್ಲದೆ, ಉತ್ತಮ ನಿದ್ರೆಯ ವಿಧಾನವನ್ನು ತಿಳಿದುಕೊಂಡ್ರು. ಸ್ಪರ್ಧಿಗಳಿಗೆ ಹಗಲಿನಲ್ಲಿ 20 ನಿಮಿಷಗಳ ಪವರ್ ನ್ಯಾಪ್ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
- ಸ್ಲೀಪ್ ಇಂಟರ್ನ್ ಶಿಪ್ ಸ್ಪರ್ಧಿಗಳನ್ನು ಕೆಲ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಲಾಗುತ್ತದೆ.
- ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ನಿದ್ರೆ ಬಗ್ಗೆ ತಮಗಿರುವ ಉತ್ಸಾಹದ ಬಗ್ಗೆ ವಿಡಿಯೋ ಮಾಡಿ ಅದನ್ನು ಕಳುಹಿಸಬೇಕು.
- ಅಭ್ಯರ್ಥಿಗಳಿಗೆ ತಮ್ಮ ನಿದ್ರೆಯನ್ನು ಸುಧಾರಿಸಲು ಎಷ್ಟು ಆಸಕ್ತಿ ಇದೆ ಎಂಬುದನ್ನು ಸಂದರ್ಶನದ ಮೂಲಕ ಪತ್ತೆ ಮಾಡಲಾಗುತ್ತದೆ. ಈ ಎಲ್ಲ ಪ್ರೊಸೆಸ್ ನಂತ್ರ ಅಭ್ಯರ್ಥಿಗಳ ಆಯ್ಕೆಯಾಗುತ್ತದೆ.
ಬೆಂಗಳೂರು ಮೂಲದ ಬ್ಯಾಂಕರ್ ಆಗಿರುವ ಸಾಯಿಶ್ವರಿ ಪಾಟೀಲ್ ಎಂಬಾಕೆ ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಸೀಸನ್ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ನಿದ್ರಿಸುವ ಇಂಟರ್ನ್ಶಿಪ್ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ.
ಮೂರು ಋತುಗಳಲ್ಲಿ ಸ್ಲೀಪ್ ಇಂಟರ್ನ್ಶಿಪ್ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಅರ್ಜಿ ಬಂದಿತ್ತು. 51 ಇಂಟರ್ನ್ಗಳಿಗೆ ಒಟ್ಟೂ 63 ಲಕ್ಷ ಸ್ಟೈಫಂಡ್ ನೀಡಲಾಗಿದೆ. ನಿದ್ರೆ ಮಾಡಿ ಹಣ ಸಂಪಾದನೆ ಮಾಡೋದು ಸುಲಭ ಎನ್ನಿಸಿದ್ರೂ, ಸ್ಪರ್ಧಿಗಳು, ನಿದ್ರೆಯ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿದ್ರೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.
ನಿದ್ರೆಯಲ್ಲೂ ಶಿಸ್ತು ಪಾಲಿಸುವುದು ಮುಖ್ಯ ಎನ್ನುತ್ತಾರೆ ಸಾಯಿಶ್ವರಿ. ಸರಿಯಾದ ಸಮಯಕ್ಕೆ ಮಲಗುವ ಮತ್ತು ಸರಿಯಾದ ಸಮಯಕ್ಕೆ ಏಳುವ ನಿಯಮ ರೂಢಿಸಿಕೊಳ್ಳಬೇಕು. ಇದ್ರಲ್ಲಿ ಪಾಲ್ಗೊಳ್ಳುವ ಜನರು ತಡರಾತ್ರಿಯವರೆಗೆ ಎಚ್ಚರವಾಗಿರುವಂತಿಲ್ಲ. ಮೊಬೈಲ್, ಸ್ಕ್ರೋಲಿಂಗ್ ನಲ್ಲಿ ಸಮಯ ಕಳೆಯುವಂತಿಲ್ಲ. ಈ ಅಭ್ಯಾಸವನ್ನು ತ್ಯಜಿಸೋದು ಕಷ್ಟವಾದ್ರೂ ಒಳ್ಳೆ ಪ್ರಯೋಜನ ನೀಡುತ್ತದೆ ಎಂದು ಸಾಯಿಶ್ವರಿ ಹೇಳಿದ್ದಾರೆ.