ರೆಸ್ಟೋರೆಂಟ್ನಲ್ಲಿ ಮಾಡುವ ಚಿಕನ್ ಲಾಲಿಪಪ್ಗಿಂತ ಮನೆಯಲ್ಲಿಯೇ ಸೂಪರ್ ಆಗಿ ಮಾಡಬಹುದು. ರೆಸ್ಟೋರೆಂಟ್ಗೆ ಹೋಗಿ ಸಮಯ, ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಮನೆಯಲ್ಲೇ ಸುಲಭವಾಗಿ ಚಿಕನ್ ಲಾಲಿಪಪ್ ಮಾಡಬಹುದು. ನಿಮ್ಮ ಮಕ್ಕಳು ನಾನ್ ವೆಜ್ ತಿನ್ನಲು ಹಠ ಮಾಡುತ್ತಿದ್ದರೆ, ಈ ರೀತಿ ಕಲರ್ ಫುಲ್, ಕ್ರಿಸ್ಪಿ, ಟೇಸ್ಟಿ ಚಿಕನ್ ಲಾಲಿಪಪ್ ಮಾಡಿ, ನೋಡಿದ ತಕ್ಷಣವೇ ಇನ್ನೂ ಬೇಕು ಅಂತ ತಿಂತಾರೆ.
ಚಿಕನ್ ಲಾಲಿಪಪ್ ಮಾಡಲು ಬೇಕಾಗುವ ಸಾಮಗ್ರಿಗಳು
- ಚಿಕನ್ ವಿಂಗ್ಸ್ ಸುಮಾರು 12ರಿಂದ 13 ಪೀಸ್
- ಒಂದು ಚಿಕ್ಕ ಚಮಚದಷ್ಟು ಕರಿಮೆಣಸಿನ ಪುಡಿ
- ಒಂದುವರೆ ಚಮಚದಷ್ಟು ಕೆಂಪುಮೆಣಸಿನ ಪುಡಿ
- ಮೂರು ದೊಡ್ಡ ಚಮಚದಲ್ಲಿ ವಿನೆಗರ್
- ಒಂದು ದೊಡ್ಡ ಚಮಚದಷ್ಟು ಡಾರ್ಕ್ ಸೋಯಾ ಸಾಸ್
- ಜೋಳದ ಹಿಟ್ಟು ಸುಮಾರು ಅರ್ಧದಿಂದ ಮುಕ್ಕಾಲು ತಟ್ಟೆ
- ಮೈದಾ ಹಿಟ್ಟು ಅರ್ಧ ಬಟ್ಟಲು
- ಬೆಳ್ಳುಳ್ಳಿ ಪುಡಿ ಅರ್ಧ ಚಮಚ
- ಎಣ್ಣೆ ಕರಿಯಲು ಅಗತ್ಯಕ್ಕೆ ತಕ್ಕಷ್ಟು.
- ರುಚಿಗೆ ತಕ್ಕಷ್ಟು ಉಪ್ಪು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
- ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ನಿಧಾನವಾಗಿ ಲಾಲಿಪಪ್ ರೀತಿಯಲ್ಲಿ ಮೂಳೆಯನ್ನು ಮಧ್ಯೆ ಇರಿಸಿ ಚಿಕ್ಕನ್ ಅನ್ನು ಮುಂದಕ್ಕೆ ಚಾಕುವಿನಿಂದ ತಳ್ಳಿ ಲಾಲಿಪಪ್ ರೀತಿಯಲ್ಲಿ ತಯಾರಿಸಿ ರೆಡಿ ಮಾಡಿಕೊಳ್ಳಿ.
- ಹಾಗೇ ಮುಂದೆ ಇದಕ್ಕೆ ಉಪ್ಪು ಕಾಳುಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಡಾರ್ಕ್ ಸೋಯಾಸಾಸ್, ಅಚ್ಚಕಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಅದನ್ನು ಹಾಗೆ ನೆನೆಯಲು ಬಿಡಬೇಕು.
- ನಂತರ ಇನ್ನೊಂದು ಪಾತ್ರೆಗೆ ಜೋಳದ ಹಿಟ್ಟು, ಮೈದಾ ಹಿಟ್ಟು ಬೆಳ್ಳುಳ್ಳಿ ಪುಡಿ ಅಚ್ಚಕಾರದ ಪುಡಿ ಉಪ್ಪು ಹಾಗೂ ನೀರು ಹಾಕಿ ಸ್ವಲ್ಪ ಬೋಂಡ ಮಾಡುವ ಅದಕ್ಕೆ ಅದನ್ನು ಕಲಸಿಕೊಳ್ಳಬೇಕು.
- ನಂತರ ಗ್ಯಾಸ್ ಹಚ್ಚಿ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಬೇಕು. ಎಣ್ಣೆಯನ್ನು ಚೆನ್ನಾಗಿ ಕಾಯಲು ಸ್ವಲ್ಪ ಸಮಯದವರೆಗೆ ದೊಡ್ಡ ಉರಿಯಲ್ಲಿ ಬಿಡಬೇಕು.
- ಎಣ್ಣೆ ಕಾದ ನಂತರ ಇದಕ್ಕೆ ಈಗಾಗಲೇ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ ಎಣ್ಣೆಯಲ್ಲಿ ಬಿಟ್ಟು ಕಡುಗೆಂಪು ಬಣ್ಣ ಬರುವವರೆಗೆ ಕರಿದರೆ ಎಣ್ಣೆಯಲ್ಲಿ ಕಾಯಿಸುವಾಗ ಬೆಂಕಿಯನ್ನು ದೊಡ್ಡ ಉರಿ ಅಲ್ಲದೆ ಸಣ್ಣ ಉರಿಯು ಅಲ್ಲದೆ ಮಧ್ಯಮ ಉರಿಯಲ್ಲಿ ಇಡಿ ಇಲ್ಲದಿದ್ದರೆ ತುಂಬಾ ಕಾದು ಬಿಡುತ್ತದೆ ಮತ್ತು ಕ್ರಿಸ್ಪೀ ಆಗಿ ತಯಾರಾಗುವುದಿಲ್ಲ ರುಚಿಕರವಾದ ಚಿಕನ್ ಲಾಲಿಪಪ್ ಸವಿಯಲು ಸಿದ್ಧ.