ನಾವು ಮನೆಯಲ್ಲಿ ವಿಶೇಷ ಸಂದರ್ಭಗಳು ಬಂದಂತಹ ಸಮಯದಲ್ಲಿ ಸಿಹಿ ಅಡುಗೆಗಳನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇದರಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಪಿಸ್ತಾ ಇತ್ಯಾದಿಗಳು ಸೇರಿರುತ್ತವೆ. ಯಾವ ಸಿಹಿ ಅಡುಗೆಗೆ ಖರ್ಜೂರ ಹಾಕುತ್ತೇವೆ, ಅಂತಹ ಅಡುಗೆಯ ಸ್ವಾದ ಬೇರೆಯೇ ಇರುತ್ತದೆ. ಆದರೆ ಖರ್ಜೂರವನ್ನು ಕೇವಲ ಇಂತಹ ಸಂದರ್ಭಗಳಲ್ಲಿ ಮಾತ್ರ ತಿನ್ನುವುದಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಈ ಕೆಳಗಿನ ಲಾಭಗಳು ನಿಮಗೆ ಸಿಗುತ್ತವೆ.
ಬೆಳಗ್ಗೆ ಖಾಲಿ ಹೊಟ್ಟೆಗೆ ಒಣ ದ್ರಾಕ್ಷಿ ಸೇವಿಸುವುದರಿಂದ ಈ ಅದ್ಬುತ ‘ಆರೋಗ್ಯ ಪ್ರಯೋಜನ’ ಪಡೆಯಿರಿ
ಖಾಲಿ ಹೊಟ್ಟೆಯಲ್ಲಿ ಯಾರೂ ಖರ್ಜೂರ ಸೇವಿಸುತ್ತಾರೆ ಅವರಿಗೆ ಸುಸ್ತು, ಆಯಾಸ ಮತ್ತು ದುರ್ಬಲತೆ ಎನ್ನುವುದು ಇರುವುದಿಲ್ಲ. ಏಕೆಂದರೆ ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೇರಳ ವಾಗಿ ಸಿಗುತ್ತದೆ. ಗ್ಲುಕೋಸ್, ಫ್ರಕ್ಟೂಸ್, ಸುಕ್ರೋಸ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಇರುವುದರಿಂದ ಎಲ್ಲವೂ ಸಹ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾಗುತ್ತವೆ. ತುಂಬಾ ವೇಗವಾಗಿ ಖರ್ಜೂರಗಳಿಂದ ಈ ಲಾಭಗಳನ್ನು ಪಡೆಯ ಬಹುದು.
- ಖರ್ಜೂರಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಕರುಳಿನ ಚಟುವಟಿಕೆ ಗಳನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ಮಾಡುವುದ ರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಸೇವಿಸುವ ಸಾಧ್ಯತೆ ಇಲ್ಲವಾಗುತ್ತದೆ. ಇದರಿಂದ ಆರೋಗ್ಯಕರವಾದ ಜೀರ್ಣಶಕ್ತಿ ನಿಮ್ಮದಾಗುತ್ತದೆ ಮತ್ತು ತೂಕ ನಿರ್ವಹಣೆ ಕೂಡ ಸಾಧ್ಯ ವಾಗುತ್ತದೆ.
- ಖರ್ಜೂರಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು, ಅಂದರೆ ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ವಿಟಮಿನ್ ಬಿ6 ಮತ್ತು ಇನ್ನಿತರ ಸತ್ವಗಳು ಯಥೇಚ್ಛವಾಗಿ ಸಿಗುತ್ತವೆ. ಇವುಗಳು ದೇಹದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತಮ್ಮದೇ ಆದ ಪಾತ್ರವನ್ನು ಹೊಂದಿರುತ್ತವೆ. ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಪಯೋಗ ಜಾಸ್ತಿ.
-
- ಖರ್ಜೂರ ನಿಮಗೆಲ್ಲ ಗೊತ್ತಿರುವ ಹಾಗೆ ತಿನ್ನಲು ಸಿಹಿಯಾಗಿ ರುತ್ತದೆ. ಅಂದರೆ ನಿಸರ್ಗದತ್ತವಾಗಿ ಇದರಲ್ಲಿ ಸಕ್ಕರೆ ಅಂಶ ಮೊದಲೇ ಇರುತ್ತದೆ.
- ಸಿಹಿ ಅಂಶವನ್ನು ಬೇಡುವ ವಿವಿಧ ಆಹಾರ ಪದಾರ್ಥ ಗಳಲ್ಲಿ ನೀವು ಖರ್ಜೂರವನ್ನು ಸೇರಿಸಿ ಸೇವಿಸ ಬಹುದು. ಅಷ್ಟೇ ಅಲ್ಲದೆ ಬೇರೆ ಬಗೆಯ ಆಹಾರಗಳಲ್ಲಿ ಹೆಚ್ಚು ವರಿಯಾಗಿ ಸಿಗುವ ಸಕ್ಕರೆ ಪ್ರಮಾಣವನ್ನು ಸೇವಿಸುವ ಸಾಧ್ಯತೆ ಯಿಂದ ತಪ್ಪಿಸಿಕೊಳ್ಳ ಬಹುದು.