ವೈವಾಹಿಕ ಜೀವನದಲ್ಲಿ ಸೆಕ್ಸ್ ಅನ್ನೋದು ತುಂಬಾನೆ ಮುಖ್ಯ. ಕಾಂಡೋಮ್ ಬಳಸಿಯೂ ಗರ್ಭ ಧರಿಸುವುದು, ಕಾಂಡೋಮ್ ಬಳಕೆ ವೇಳೆ ಎಡವಟ್ಟುಗಳಾಗೋದು ಕಾಮನ್. ಗರ್ಭನಿರೋಧಕವಾಗಿ ಕಾಂಡೋಮ್ ಬಳಸುವುದು ಸುರಕ್ಷಿತದ ಜೊತೆಗೆ ಆರೋಗ್ಯಕರ ಕೂಡ ಹೌದು. ಆದರೆ ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್ ಗ್ಯಾರಂಟಿಯನ್ನು ಕಾಡೋಮ್ ಕಂಪನಿಗಳು ಕೂಡ ನೀಡುವುದಿಲ್ಲ.
ಆದರೆ ಈ ಎರಡು ಪರ್ಸೆಂಟ್ ಲೆಕ್ಕಾಚಾರಕ್ಕಿಂತಲೂ ಕಾಂಡೋಮ್ ಧರಿಸುವ ವೇಳೆ ಮಾಡುವ ಕೆಲವು ತಪ್ಪುಗಳು ಗರ್ಭ ಧರಿಸೋದಕ್ಕೆ ಕಾರಣವಾಗುತ್ತೆ. ಕೆಲವರಿಗೆ ಕಾಂಡೋಮ್ನ್ನು ಸರಿಯಾಗಿ ಬಳಸುವುದು ಹೇಗೆ ಅನ್ನೋದೇ ತಿಳಿದಿರೋದಿಲ್ಲ. ಅವರು ತಮಗೆ ತೋಚಿದಂತೆ ಬಳಸುತ್ತಾರೆ. ಕೆಲವೊಮ್ಮೆ ಸೆಕ್ಸ್ ವೇಳೆಗಿನ ಎಕ್ಸಾಯಿಟ್ಮೆಂಟ್ನಲ್ಲಿ ತಾಳ್ಮೆ ಕಳೆದುಕೊಂಡು ಹೇಗೆ ಹೇಗೋ ನೆಪ ಮಾತ್ರಕ್ಕೆ ಕಾಂಡೋಮ್ ಧರಿಸೋದೂ ಇದೆ. ಇದು ತುಂಬ ಡೇಂಜರಸ್.
ಯಾವ ಕಾಂಡೋಮ್ ಸರಿಯಾದ ಆಯ್ಕೆ ಎಂದು ತಿಳಿದಿಲ್ಲದಿದ್ದರೆ, ಕೆಲವು ಸಲಹೆಗಳು ಇಲ್ಲಿವೆ.
ಗಾತ್ರ
ನೀವು ಸರಿಯಾದ ಗಾತ್ರದ ಕಾಂಡೋಮ್ ತೆಗೆದುಕೊಳ್ಳದಿದ್ದರೆ, ಅದು ಒಡೆದು ಹೋಗುವ ಅಥವಾ ಜಾರಿ ಬೀಳುವ ಸಾಧ್ಯತೆಯಿದೆ. ಇದು ಹಾಗಲ್ಲ, ಆದ್ದರಿಂದ ಗಾತ್ರಕ್ಕೆ ಅನುಗುಣವಾಗಿ ಅದನ್ನು ಆಯ್ಕೆ ಮಾಡುವುದು ಉತ್ತಮ. ಯಾವ ಕಂಪನಿಯ ಕಾಂಡೋಮ್ ತೆಗೆದುಕೊಳ್ಳಲಾಗಿದೆ ಅನ್ನೋದನ್ನು ಪರಿಶೀಲಿಸಿ, ಇದರಿಂದ ಆ ಕಾಂಡೋಮ್ ಗಾತ್ರವನ್ನು ಪತ್ತೆ ಮಾಡೋದು ಸುಲಭವಾಗುತ್ತೆ.
ಮೆಟೀರಿಯಲ್
ಕಾಂಡೋಮ್ ಸಾಮಾನ್ಯವಾಗಿ ಲ್ಯಾಟೆಕ್ಸ್ ನಿಂದ ತಯಾರಿಸಲಾಗುತ್ತೆ. ಆದಾಗ್ಯೂ, ಅದರ ಬಗ್ಗೆ ಕಡಿಮೆ ಮಾಹಿತಿಯ ಕಾರಣದಿಂದಾಗಿ, ಈ ವಸ್ತುವು ಅಲರ್ಜಿಗಳಿಗೆ ಕಾರಣವಾಗಬಹುದು ಎಂದು ಕೆಲವೇ ಜನರಿಗೆ ತಿಳಿದಿದೆ. ಲ್ಯಾಟೆಕ್ಸ್ ಅಲರ್ಜಿ ಇರುವ ಜನರು ಲ್ಯಾಟೆಕ್ಸ್ ಅಲ್ಲದ ಕಾಂಡೋಮ್ ಖರೀದಿಸಬಹುದು.
ಅಳತೆ
ಕಾಂಡೋಮ್ ಬೇರೆ ಬೇರೆ ಅಳತೆಯಲ್ಲಿ ಬರುತ್ತೆ.ಸೆಕ್ಸ್ ಲೈಫ್(Sex life) ಎಂಜಾಯ್ ಮಾಡಲು ನಿಮಗೆ ಎಷ್ಟು ದಪ್ಪಗಿನ ಕಾಂಡೋಮ್ ಬೇಕು ಅನ್ನೋದನ್ನು ನೀವು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ ಅಲ್ಟ್ರಾಥಿನ್ ಕಾಂಡೋಮ್ ಗಳ ಬೇಡಿಕೆ ಹೆಚ್ಚಾಗಿದೆ. ಇದನ್ನ ನೀವು ಆಯ್ಕೆ ಮಾಡಬಹುದು.
ಟೆಕ್ಸ್ಚರ್ಡ್ ಕಾಂಡೋಮ್
ಕಾಂಡೋಮ್ ಗಳು ಸಾದಾ ಫಿನಿಶ್ ನಿಂದ ಟೆಕ್ಸ್ಚರ್ಡ್ ಔಟರ್ ಲೇಯತ್ ಸಹ ಬರುತ್ತವೆ. ಸಂಗಾತಿಗೆ ಇದು ಮೊದಲ ಅನುಭವವಾಗಿದ್ದರೆ, ಪ್ಲೇನ್ ಕಾಂಡೋಮ್ ಉತ್ತಮ ಆಯ್ಕೆಯಾಗಿದೆ, ಇದರಿಂದ ಅವರು ಆರಾಮದಾಯಕ ಅನುಭವ ಹೊಂದುತ್ತಾರೆ. ಇನ್ನು ಹೆಚ್ಚಿನ ಎಂಜಾಯ್ ಮಾಡಲು ಟೆಕ್ಸ್ಚರ್ಡ್ ಫಿನಿಶಿಂಗ್ ಹೊಂದಿರುವ ಕಾಂಡೋಮ್ ಆಯ್ಕೆ ಮಾಡಬಹುದು.