ಧಾರವಾಡ:- ನಿವೃತ್ತ ಐಜಿಪಿ ಹಾಗೂ ಹುಬ್ಬಳ್ಳಿ ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿಜಿ ಕೊಕಟನೂರ ವಿಧಿವಶರಾಗಿದ್ದಾರೆ.
Bangalore Power Cut: ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!
79 ವರ್ಷದವರಾಗಿರುವ ಬಿಜಿ ಕೊಕಟನೂರ ಅವರು, ನಿನ್ನೆ ಸಾಯಂಕಾಲ ಧಾರವಾಡದಲ್ಲಿ ನಿಧನ ಹೊಂದಿದ್ದಾರೆ. ಈ ಮೂಲಕ ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇನ್ನೂ ಇಂದು ಮದ್ಯಾಹ್ನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸ್ವಗ್ರಾಮ ಹಿಡಕಲ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಅಲ್ಲದೇ ಬಿಜಿ ಕೊಕಟನೂರ ನಿಧನಕ್ಕೆ ಪೊಲೀಸ್ ಇಲಾಖೆ ಸೇರಿ ರಾಜಕೀಯ ಗಣ್ಯರು ಹಾಗೂ ಮತ್ತಿತರರು ಸಂತಾಪ ಸೂಚಿಸಿದರು.