ಬಾಗಲಕೋಟ:- ಸಿಎಂ ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ನ ಹಿರಿಯ ನಾಯಕ ಕೋಳಿವಾಡ ಹೇಳಿಕೆ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.
Hubballi: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ: ಪೆನ್ ಡ್ರಾಪ್, ಆ್ಯಪ್ ಸ್ಥಗಿತಗೊಳಿಸಿ ಧರಣಿ!
ಬಾಗಲಕೋಟ ನಗರದಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರದ ವೇಳೆ ಬಿಎಸ್ವೈ ಮೇಲೆ ಆರೋಪ ಬಂದಿತ್ತು. ತನಿಖೆ ಎದುರಿಸಲು ಸಿಎಂ ಸ್ಥಾನ ತೋರಿಯಲು ಹೇಳಿದ್ರು.
ಹಿಂದಿನ ತಮ್ಮ ಹೇಳಿಕೆಯನ್ನು ಸಿಎಂ ನೆನಪಿಸಿಕೊಳ್ಳಬೇಕಿದೆ. ಕಾನೂನು ಹೋರಾಟಕ್ಕೆ ಎಲ್ಲರಿಗೂ ಶಕ್ತಿ ಇದೆ. ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಜೊತೆಗಿದ್ರೂ ಸಿಎಂ ಕುರ್ಚಿಗೆ ಟವಲ್ ಹಾಕಿ ಕೂತಿದ್ದಾರೆ.
ಹೆಸರು ಹೇಳದೆ ಡಿಸಿಎಂ ಶಿವಕುಮಾರ್ ಗೆ ನಿಖಿಲ್ ಟಾಂಗ್ ಕೊಟ್ಟಿದ್ದಾರೆ. ತಮ್ಮ ಪಕ್ಷದ ನಾಯಕರ ಮನಸ್ಸಿನಲ್ಲಿ ಏನೇನಿದೆ ಅನ್ನೋದನ್ನ ಸಿದ್ದರಾಮಯ್ಯ ಅವ್ರೇ ಹೇಳಬೇಕು. ಜೊತೆಗಿದ್ದವರಿಂದಲೇ ಸಿಎಂ ಕುರ್ಚಿಗೆ ಪೈಪೋಟಿ ಶುರುವಾಗಿದೆ ಎಂದರು.