ಮುಂಬೈ: 2025ರ ಐಪಿಎಲ್ಗೆ (IPL 2025) ನಡೆಯಲಿರುವ ಮೆಗಾ ಹರಾಜಿಗೂ ಮುನ್ನವೇ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳಬಹುದಾದದ ಮತ್ತು ಬಿಡುಗಡೆ ಮಾಡಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿವೆ.
ಮೂಲಗಳ ಪ್ರಕಾರ, ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ (RTM Card) ಸೇರಿದಂತೆ ತಂಡದಲ್ಲಿ 6ಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸುವುದಿಲ್ಲ ಎಂದು ನಿರೀಕ್ಷಿಸಿವೆ. ಆದಾಗ್ಯೂ ಕೆಲ ಫ್ರಾಂಚೈಸಿಗಳು ಆರ್ಟಿಎಂ ಬಳಕೆ ಸೇರಿ 8 ಆಟಗಾರರನ್ನ ಉಳಿಸಿಕೊಳ್ಳಲು ಅನುಮತಿ ಕೇಳಿವೆ. ಏಕೆಂದರೆ ಬಿಸಿಸಿಐ (BCCI) ತೀರ್ಮಾನದ ಮೇಲೆ ಈ ಬಾರಿ ಸಿಎಸ್ಕೆ ಪರ ಎಂ.ಎಸ್ ಧೋನಿ ಕಣಕ್ಕಿಳಿಯುತ್ತಾರಾ? ಇಲ್ವಾ? ಅನ್ನೋದು ನಿರ್ಧಾರವಾಗಲಿದೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಉಳಿಸಿಕೊಳ್ಳಬಹುದಾದ 5 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ, ಅದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಅವರ ಸ್ಥಾನ ಖಚಿತವಾಗಿದೆ. ಇದೇ ನಿಟ್ಟಿನಲ್ಲಿ ಮುಂಬೈ, ಆರ್ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತ್ತಾ ನೈಟ್ರೈಡರ್ಸ್ (KKR) ಕೆಲ ಆಟಗಾರರನ್ನು ಬಿಡುಗಡೆ ಮಾಡಲು ಪಟ್ಟಿ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.
ಯಾವ ಫ್ಯಾಂಚೈಸಿಯಿಂದ ಯಾರ್ಯಾರು ಔಟ್?
* ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ
* ಲಕ್ನೋ ಸೂಪರ್ ಜೈಂಟ್ಸ್ – ಕೆ.ಎಲ್ ರಾಹುಲ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು – ಫಾಫ್ ಡು ಪ್ಲೆಸಿಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು – ಗ್ಲೆನ್ ಮ್ಯಾಕ್ಸ್ವೆಲ್
* ಕೋಲ್ಕತ್ತಾ ನೈಟ್ ರೈಡರ್ಸ್ – ವೆಂಕಟೇಶ್ ಅಯ್ಯರ್
* ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ
* ಲಕ್ನೋ ಸೂಪರ್ ಜೈಂಟ್ಸ್ – ಕೆ.ಎಲ್ ರಾಹುಲ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು – ಫಾಫ್ ಡು ಪ್ಲೆಸಿಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು – ಗ್ಲೆನ್ ಮ್ಯಾಕ್ಸ್ವೆಲ್
* ಕೋಲ್ಕತ್ತಾ ನೈಟ್ ರೈಡರ್ಸ್ – ವೆಂಕಟೇಶ್ ಅಯ್ಯರ್
ಆರ್ಟಿಎಂ ಕಾರ್ಡ್ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೇ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ.