ಹುಬ್ಬಳ್ಳಿ: ಇಂಡಿಯನ್ ರೈಲ್ವೆ ಇನ್ ಫ್ರಾಸ್ಟ್ರಕ್ಟರ್ ಪ್ರೊವೈಡರ್ಸ್ ಅಸೋಸಿಯೇಶನ್ (ಐಆರ್ ಐಪಿಎ) ಉಪಾಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಹಾಗೂ ಇತರ ಗುತ್ತಿಗೆದಾರರನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸನ್ಮಾನಿಸಿದರು.
ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ: ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ!
ಸಚಿವರಾದ ನಂತರ ಇದೇ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಪ್ರಸಾದ ಅವರನ್ನು ಅಭಿನಂದಿಸಿ, ಅವರ ಸಮಾಜ ಸೇವಾ ಕಾರ್ಯಗಳನ್ನು ಪ್ರಶಂಸಿಸಿದರು.
ಸ್ವರ್ಣ ಗ್ರುಪ್ ಆಫ್ ಕಂಪನಿಯಿಂದ ಬೆಳಗಾವಿ ರೈಲು ನಿಲ್ದಾಣ, ಹುಬ್ಬಳ್ಳಿಯ ಉಣಕಲ್ಲ ಹಾಗೂ ಕೃಷ್ಣ ಮಂದಿರ ಬಳಿಯ ಅಂಡರ್ ಪಾಸ್ ಮುಂತಾದವುಗಳನ್ನು ದಾಖಲೆ ಸಮಯದಲ್ಲಿ ರ್ಪೂಣಗೊಳಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಗದಗ-ವಾಡಿ ಹೊಸ ಮಾರ್ಗ, ಗಿಣಿಗೇರಾ- ರಾಯಚೂರ ಸೇರಿ ಪ್ರಸ್ತುತ ಕೈಗೊಳ್ಳಲಾಗಿರುವ ರೈಲ್ವೆ ಯೋಜನೆಗಳ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ರೈಲ್ವೆ ಗುತ್ತಿಗೆದಾರರಾದ ಕೆ. ರಮಣಮೂರ್ತಿ, ಎನ್.ಎಸ್.ಆರ್. ಪ್ರಸಾದ, ಚಂದ್ರಶೇಖರ, ಸುಬ್ಬಾರೆಡ್ಡಿ, ಶಂಕರ ರಾವ್, ಇತರರು ಉಪಸ್ಥಿತರಿದ್ದರು.