ನವದೆಹಲಿ:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ಕೊಟ್ಟ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಾಗ ಪ್ರತಿಭಟನೆ ಮಾಡಿದ್ರಿ, ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ದಹನ ಮಾಡಿದ್ರಿ. ಈಗ ಹೈಕೋರ್ಟ್ ಆದೇಶ ಆಗಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ವಿರುದ್ಧ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ವಕೀಲರಾಗಿರುವ ಅನುಭವ ಇದೆ. ನೈತಿಕತೆ ಉಳಿಸಿಕೊಂಡು ಬಂದವರಲ್ಲವೇ? ಲೋಕಾಯಕ್ತ ತನಿಖೆಗೆ ಆದೇಶ ಮಾಡಿದಾಗ ಅಧಿಕಾರದಲ್ಲಿ ಉಳಿಬೇಕಾ ಅಂತ ಅವರೇ ಹೇಳಬೇಕು. ಹೈಕೋರ್ಟ್ ಆದೇಶ ನೀಡಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಲೇವಡಿ ಮಾಡಿದ್ದಾರೆ.
ಮೂಡಾ ಹಗರಣ ದೇಶದ್ಯಾಂತ ಪ್ರಾಮುಖ್ಯತೆ ಪಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಿನ್ನೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಕಾನೂನು ತಜ್ಞರು ಅನುಭವದ ಆಧಾರದ ಮೇಲೆ ವಿಶ್ಲೇಷಣೆ ಮಾಡ್ತಿದ್ದಾರೆ. ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಆದರೆ ಸಿಎಂಗೆ ಮಾತ್ರ ತೀರ್ಪಿನ ಪ್ರತಿ ಸಿಕ್ಕಿಲ್ಲ, ಓದಿಲ್ಲ ಅಂತಿದ್ದಾರೆ. ಅಲ್ಲದೇ ಕುಮಾರಸ್ವಾಮಿ ರಾಜೀನಾಮೆಯನ್ನೂ ಸಿಎಂ ಕೇಳಿದ್ದಾರೆ. ಅವರೂ ಜಾಮೀನಿನ ಮೇಲೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ಬಹಳ ವ್ಯತಾಸ ಇದೆ. ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರವನ್ನು ಅಸ್ಥಿರ ಮಾಡಲು, ನನ್ನ ವರ್ಚಸ್ಸಿಗೆ ಕಪ್ಪು ಮಸಿ ಬಳೆಯಲು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ನಾನು ಆರೋಪದಿಂದ ಮುಕ್ತನಾಗಿ ಮಾತನಾಡುತ್ತೇನೆ ಎಂದಿದ್ದೆ. ಆದ್ರೆ ಇವತ್ತು ನಿಮ್ಮ ಭಂಡತನ ಏನೂ ಅನ್ನೋದು ತೋರಿಸುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.