ಬೆಂಗಳೂರು: ಎಫ್ಐಆರ್ ಆದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕು. ಎಫ್ಐಆರ್ ಆದ ತಕ್ಷಣ ನಿಮ್ಮ ಪೊಲೀಸರ ಮುಂದೆ ನೀವು ನಿಂತುಕೊಳ್ಳಬೇಕಾಗುತ್ತದೆ. ಬಿಜೆಪಿ , ಎನ್ಡಿಎ ಅವರು ರಾಜೀನಾಮೆ ಕೇಳುತ್ತಾ ಇದ್ದೇವೆ. ರಾಜೀನಾಮೆ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸಿಎಂ ವಿರುದ್ಧ ತೀರ್ಪು ಸಂಬಂಧ ಜಯನಗರದ (Jayanagar) ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವಿನ ದಿನವಾಗಿದೆ. ರಾಜ್ಯ ನಡೆಸುವ ಮುಖ್ಯಮಂತ್ರಿ ಮೇಲೆ ಆಪಾದನೆ ಬಂದು ಹೈಕೋರ್ಟ್ ಆದೇಶ ಆಗಿದೆ. ಜನ ಪ್ರತಿನಿಧಿಗಳ ಕೋರ್ಟ್ ಎಫ್ಐಆರ್ ಆಗಲಿ ಎಂದು ಹೇಳಿದೆ ಎಂದರು
ನಮ್ಮ ಮೇಲೆ ಆಪಾದನೆ ಇಲ್ಲ. ಇದು ಬಿಜೆಪಿ ಪ್ರೇರಿತ ಎಂದು ರಾಜಕೀಯ ದಾಳ ಹೂಡಿದ್ದರು. ರಾಜಭವನ ಅನುಮತಿ ಕೊಟ್ಟ ತಕ್ಷಣ ರಾಜಭವನ ಕಡೆ ಕಾಂಗ್ರೆಸ್ ಅವರು ತಿರುಗಿಬಿಟ್ಟರು. ರಾಜಭವನವನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಸ್ಫೋಟಿಸುತ್ತೀವಿ ಎಂದು ಕಾಂಗ್ರೆಸ್ ಅವರು ವಿಜೃಂಭಣೆ ಮಾಡಿದ್ದರು. ಈಗ ತನಿಖೆಗೆ ಸೂಕ್ತ ಎಂದು ಆದೇಶ ಆಗಿದೆ ಎಂದು ಹೇಳಿದರು.