ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಸೆಪ್ಟಂಬರ್ 27 ರಂದು ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು ದೊಡ್ಡ ಮೊತ್ತವನ್ನು ಕಲೆ ಹಾಕಿದರೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.
ರಿಷಭ್ ಪಂತ್ಗೆ ರೂಪಿಸಿರುವ ಬೌಲಿಂಗ್ ಗೇಮ್ ಪ್ಲ್ಯಾನ್ ತಿಳಿಸಿದ ನೇಥನ್ ಲಯಾನ್
ಕಳೆದ ಭಾನುವಾರ ಅಂತ್ಯವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 56 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಆದರೆ, ದ್ವಿತೀಯ ಇನಿಂಗ್ಸ್ನಲ್ಲಿ ಅವರು ವೈಫಲ್ಯ ಅನುಭವಿಸಿದ್ದರು. ಆದರೆ, ಆರ್ ಅಶ್ವಿನ್ (113), ರವೀಂದ್ರ ಜಡೇಜಾ (86 ರನ್), ಶುಭಮನ್ ಗಿಲ್ (119) ಹಾಗೂ ರಿಷಭ್ ಪಂತ್ (109) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡ 280 ರನ್ಗಳ ಭರ್ಜರಿ ಗೆಲುವು ಪಡೆದಿತ್ತು.
2024ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದವರು
ಜೋ ರೂಟ್: 11 ಪಂದ್ಯಗಳಿಂದ 986 ರನ್ಗಳು
ಯಶಸ್ವಿ ಜೈಸ್ವಾಲ್: 7 ಪಂದ್ಯಗಳಿಂದ 806 ರನ್ಗಳು
ಕುಸಾಲ್ ಮೆಂಡಿಸ್: 6 ಪಂದ್ಯಗಳಿಂದ 761 ರನ್ಗಳು
ಒಲ್ಲಿ ಪೋಪ್: 11 ಪಂದ್ಯಗಳಿಂದ 745 ರನ್ಗಳು
ಬೆನ್ ಡಕೆಟ್: 11 ಪಂದ್ಯಗಳಿಂದ 707 ರನ್ಗಳು
ಮೊದಲನೇ ಟೆಸ್ಟ್ ಪಂದ್ಯ ಆಡಿದ್ದ ಅದೇ ಆಟಗಾರರನ್ನು ಎರಡನೇ ಟೆಸ್ಟ್ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ. ಆದರೆ, ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಕೆಲ ಬದಲಾವಣೆಗಳನ್ನು ಮಾಡಬಹುದು. ಕಾನ್ಪುರ್ ಪಿಚ್ ಸ್ಪಿನ್ನರ್ಗಳ ಸ್ನೇಹಿಯಾಗಲಿದೆ. ಈ ಹಿನ್ನೆಲೆಯಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಆ ಮೂಲಕ ಕಳೆದ ಪಂದ್ಯವಾಡಿದ್ದ ಆಕಾಶ್ ದೀಪ್ ಅವರನ್ನು ಕೂರಿಸುವ ಸಾಧ್ಯತೆ ಇದೆ.