ಕೇಂದ್ರ ಸರ್ಕಾರಿ ನೌಕರರು ಪ್ರತಿ ವರ್ಷದಂತೆ ಈ ವರ್ಷವು ಜುಲೈ ತಿಂಗಳ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಘೋಷಣೆಗೆ ಕಾಯುತ್ತಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಾಗುವ ತುಟ್ಟಿಭತ್ಯೆ ಜನವರಿಯದ್ದು ಘೋಷಣೆ ಆಗಿದ್ದು, 2024ರ ಜುಲೈ ತಿಂಗಳದ್ದು ಘೋಷಣೆ ಬಾಕಿ ಇದೆ. ಈ ಪರಿಷ್ಕರಣೆ ಲಕ್ಷಾಂತರ ನೌಕರರಿಗೆ ಹಣದುಬ್ಬರ ಸಮಸ್ಯೆ ಸರಿದೂಗಿಸಲು ಸಹಾಯವಾಗುತ್ತದೆ.
ಈ ವರ್ಷದ ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಘೋಷಣೆಗೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ ಆಗುತ್ತದೆ. ವರದಿಗಳ ಪ್ರಕಾರ, ಈ ಬಾರಿ ಶೇ.3 ರಿಂದ 4 ರಷ್ಟು ಏರಿಕೆ ಆಗಬಹುದು ಎನ್ನಲಾಗಿದೆ. ಸದ್ಯ ಲಕ್ಷಾಂತರ ನೌಕರರಿಗೆ ಮಹಾನವಮಿ ದಸರಾ ಹಬ್ಬಕ್ಕು ಮೊದಲೇ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಜುಲೈ ತಿಂಗಳು ಕೆಳದು ಒಂದೂವರೆ ತಿಂಗಳಾಗಿದೆ. ಇನ್ನೂ ಡಿಎ ಪರಿಷ್ಕರಣೆ ನಿರ್ಧಾರ ಪ್ರಕಟವಾಗಿಲ್ಲ. ಇದೇ ಸೆಪ್ಟಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕೇಂದ್ರವು ತನ್ನ ನೌಕರರಿಗೆ ಬಂಪರ್ ಕೊಡುಗೆ ಘೋಷಿಸಲಿದೆ.
Shankh Air: ಭಾರತದಲ್ಲಿ ಪಾದಾರ್ಪಣೆ ಮಾಡಿದೆ ಹೊಸ ಏರ್ʼಲೈನ್ಸ್ ಸಂಸ್ಥೆ..! ಯಾವುದು ಗೊತ್ತಾ..?
ಜುಲೈ ತಿಂಗಳ ಪರಿಷ್ಕರಣೆಯು ಈ ಹಿಂದಿನ ಜನವರಿಯಿಂದ ಜೂನ್ವರೆಗಿನ ಎಐಸಿಪಿಐ ಸೂಚ್ಯಂಕ ಆಧರಿಸಿ ಮಾಡಲಾಗುತ್ತದೆ. ಈ ಫಿಟ್ಮೆಂಟ್ ಅಂಶವು 1.3 ಪರಿಗಣಿಸಿದಲ್ಲಿ, ನೌಕರರು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವಾಗಿ ಶೇಕಡಾ 3ರಷ್ಟು ಏರಿಕೆ ಪಡೆಯುತ್ತಾರೆ.
ಈ ಹಿಂದೆ ತುಟ್ಟಿಭತ್ಯೆ ಶೇಕಡಾ 4ರಷ್ಟು ಹೆಚ್ಚಿಸಿದಾಗ ಅದರ ಪ್ರಮಾಣ 50ಕ್ಕೆ ತಲುಪಿತು. ಇದೀಗ ಮತ್ತೆ 3ರಷ್ಟು ಏರಿಕೆ ಮಾಡಿದರೆ ಅದರ ಪ್ರಮಾಣ ಒಟ್ಟು 53ಕ್ಕೆ ಹೆಚ್ಚಾಗಲಿದೆ. ಇದೆಲ್ಲ ಹೆಚ್ಚಳವು ಮೂಲ ವೇತನ ಹಾಗೂ ಮನೆ ಬಾಡಿಗೆ ಭತ್ಯೆಯಂತಹ ಇತರ ಏರಿಕೆ ಮೇಲೆ ಪ್ರಭಾವ ಬೀರುತ್ತದೆ.
ಪ್ರಸಕ್ತ ಏಳನೇ ವೇತನ ಆಯೋಗವು 2016ರಲ್ಲಿ ಜಾರಿಯಾಗಿದೆ. ಒಟ್ಟು ಎಂಟೂವರೆ ವರ್ಷಗಳಲ್ಲಿ ಇದರಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರು ಅನೇಕ ಆರ್ಥಿಕ ಲಾಭ ಪಡೆದುಕೊಂಡಿದ್ದಾರೆ. ಕಾಲ ಕಾಲಕ್ಕೆ ತಕ್ಕಂತೆ ಹಣದುಬ್ಬರಕ್ಕೆ ಪರಿಹಾರ ಕಂಡು ಕೊಂಡಿದ್ದಾರೆ.
ಏಳನೇ ವೇತನ ಆಯೋಗ 2026ರ ಹೊತ್ತಿಗೆ ಕೊನೆಗೊಳ್ಳಲಿದೆ. ಅಂದು 8ನೇ ವೇತನ ಆಯೋಗ ಜಾರಿಗೆ ಬರಲಿದೆ. ಅದರ ಆಧಾರದಡಿ ಏನೆಲ್ಲ ವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರಗಳು ಏರಿಕೆ ಆಗಲಿವೆ ಎಂದು ನೌಕರರು ಇವಾಗಿನಿಂದಲೇ ಲೆಕ್ಕಾಚಾರ ಹಾಕಲು ಶುರುವಿಟ್ಟುಕೊಂಡಿದ್ದಾರೆ. ಈಗಾಗಲೇ ಕೇಂದ್ರ ನೌಕರರ ಯೂನಿಯಟ್, ಒಕ್ಕೂಟಗಳು ಹಲವು ಶಿಫಾರಸುಗಳು, ಮನವಿ ಮಾಡಲಾಗಿದೆ.