ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ಮೂರು ದಿನಗಳ ನಡೆಯುವ ಕಾಡಸಿದ್ದೇಶ್ವರ ಪಟಾಕಿ ಜಾತ್ರೆ ಕುಸ್ತಿ ಕಳಸೋತ್ಸವ ಶ್ರೀ ಕಾಡಸಿದ್ದೇಶ್ವರ ಮಹಾರಾಜ ಕೀ ಜೈ ಎಂಬ ಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನಗರದ ವಿವಿಧ ಬಡಾವಣೆಗಳಲ್ಲಿ. ಕೋಟ್ಯಾಂತರ ರೂ.ಗಳ ಪಟಾಕಿ ಮದ್ದನ್ನು ಹಾರಿಸುವುದರ ಮೂಲಕ ಭಕ್ತರು ತಮ್ಮ ಹರಕೆಯನ್ನು ಪೂರೈಸಿಕೊಂಡರು.
ಪಟಾಕಿ ಮದ್ದು ಹಚ್ಚುವುದರಿಂದ ದೇವರು ನಮಗೆ ಬೇಡಿದ ವರವನ್ನು ಕೊಡುತ್ತಾನೆ ಎಂಬ ಭಕ್ತರ ನಂಬಿಕೆಯಾಗಿದೆ.
ನಂದಿಕೋಲು, ಕರಡಿ ಮಜಲು, ಸನಾದಿ ಹಾಗೂ ಸಕಲ ವಾದ್ಯಗೋಷ್ಠಿಗಳೊಂದಿಗೆ ಕಾರ್ಯಕ್ರಮ ಅತಿ ವೈಭವದಿಂದ ರಾತ್ರಿವರೆಗೂ ನಡೆಯಿತು.
ಸೂಕ್ತ ಪೋಲಿಸ್ ಬಂದೋಬಸ್ತ್:
ಶ್ರೀ ಕಾಡಸಿದ್ಧೇಶ್ವರರ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುತ್ತ ಮುತ್ತಲೂ ಪೊಲೀಸ್ ಸಿಬ್ಬಂದಿಗಳಿಂದ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ