ಬೆಂಗಳೂರು:- ಬೆಂಗಳೂರು ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಸ್ಪೋಟಕ ಮಾಹಿತಿ ಕೊಟ್ಟಿದ್ದಾರೆ.
BJP MLA ಮುನಿರತ್ನ ವಿರುದ್ಧದ ಕೇಸ್ಗಳು ಅಧಿಕೃತವಾಗಿ ಎಸ್ಐಟಿಗೆ ವರ್ಗ!
ಕೊಲೆ ಪ್ರಕರಣ ಬೆಳಕಿಗೆ ಬಂದು ಎರಡು ದಿನದಲ್ಲಿ ಹಂತಕನ ಮಾಹಿತಿ ಖಾಕಿಗೆ ಸಿಕ್ಕಿದೆ. ಆದರೆ ಆತ ಯಾರು? ಎಲ್ಲಿಯವನು? ಯಾಕಾಗಿ ಕೊಲೆ ಮಾಡಿದ್ದ ಅನ್ನೋದು ಮಾತ್ರ ಇನ್ನೂ ನಿಗೂಢ.
29 ವರ್ಷದ ಮಹಾಲಕ್ಷ್ಮಿ ಮೃತದೇಹ ಪೀಸ್ ಪೀಸ್ ಆಗಿ ಪತ್ತೆಯಾಗಿದ್ದ ಕೇಸ್ ತನಿಖೆ ಚುರುಕುಗೊಂಡಿದೆ. ಅನುಮಾನಸ್ಪದ ವ್ಯಕ್ತಿಗಳನ್ನ ಖಾಕಿ ಪಡೆ ಒಬ್ಬಬ್ಬರಾಗಿ ವಿಚಾರಣೆ ಮಾಡ್ತಿದೆ. ಸಿಕ್ಕಿರೋ ಸಾಕ್ಷಿಗಳನ್ನ ಆಧರಿಸಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಆದರೆ ಕೊಲೆಗಾರ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿರೋ ಹೊತ್ತಲ್ಲೇ ಹಂತಕನ ಸುಳಿವು ಪತ್ತೆಯಾಗಿದೆ ಅಂತ ಖುದ್ದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಇಂದೆಂದೂ ಕಂಡರಿಯದ ಘೋರ ಸೃಷ್ಟಿಸಿದ್ದವನ ಸುಳಿವು ಸಿಕ್ಕಿದೆ. ಪೊಲೀಸರು ಹಗಲು ರಾತ್ರಿ ಶ್ರಮಕ್ಕೆ ಫಲ ಸಿಕ್ತಿದೆ. ಆದ್ರೆ ಕಮಿಷನರ್ ಹೇಳಿದಂತೆ ಹೊರರಾಜ್ಯದವನಾಗಿರೋ ಬೆಂಗಳೂರಿನಲ್ಲೇ ವಾಸವಿದ್ದ ಆ ಆರೋಪಿ ಯಾರು ಅನ್ನೊದೇ ಯಕ್ಷ ಪ್ರಶ್ನೆ. ಸದ್ಯ ಈತನ ಜಾಡು ಹಿಡಿದು ಹೊರರಾಜ್ಯಕ್ಕೆ ಹೋಗಿರೋ ಖಾಕಿ ಪಡೆಗೆ ಆರೋಪಿ ಹುಡುಕಾಟ ಸವಾಲಾಗಿದೆ.
ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಮಹಾಲಕ್ಷ್ಮಿ ದೇಹದ 50ಕ್ಕೂ ಹೆಚ್ಚು ಪೀಸ್ ಗಳು ಪತ್ತೆಯಾಗಿದ್ವು. ಆದ್ರೆ ಮಹಾಲಕ್ಷ್ಮಿ ದೇಹವನ್ನ ತುಂಡರಿಸಿದ್ದ ಪಾಪಿ ಮನೆಯಲ್ಲಿ ಸಾಕ್ಷಿಗಳನ್ನ ಅಳಿಸೋಕೆ ಪ್ರಯತ್ನಿಸಿರೋ ವಿಚಾರ ಬಯಲಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಮನೆಯಲ್ಲೆಲ್ಲೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೌದು ಕೊಲೆ ನಡೆದ ಸ್ಥಳದಲ್ಲಿ FSL ಟೀಂ ಇಂಚಿಂಚೂ ಶೋಧ ನಡೆಸಿತ್ತು. ಆದರೆ ಫ್ರಿಡ್ಜ್ ನಿಂದ ತೊಟ್ಟಿಕ್ಕಿರೋ ರಕ್ತ ಬಿಟ್ರೆ ಮನೆಯಲ್ಲಿ ರಕ್ತದ ಕಲೆಗಳಿಲ್ಲ. ಲುಮಿನಲ್ ಟೆಸ್ಟ್ ಮಾಡಿದ್ರು ಮನೆಯ ಫ್ಲೋರ್ ಗಳಲ್ಲಿ ರಕ್ತದ ಗುರುತು ಪತ್ತೆಯಾಗಿಲ್ಲ. ಯಾವುದೋ ಕೆಮಿಕಲ್ ಉಪಯೋಗಿಸಿ ಇಡೀ ಮನೆಯನ್ನ ಹಂತಕ ಸ್ವಚ್ಚ ಮಾಡಿದ್ದಾನೆ ಅನ್ನೋ ದಟ್ಟ ಅನುಮಾನ ಕಾಡ್ತಿದೆ.
ಇನ್ನ ಅಶ್ರಫ್ ಎಂಬಾತನ ಮೇಲೆ ಮಹಾಲಕ್ಷ್ಮಿ ಪತಿ ಹೇಮಂತ್ ಅನುಮಾನ ವ್ಯಕ್ತಪಡಿಸಿದ್ರು. ಸದ್ಯ ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಯಲ್ಲಿ ಈತನ ಪಾತ್ರ ಇಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಪೊಲೀಸರಿಗೆ ಮನೆಯಲ್ಲಿ ಮಹಾಲಕ್ಷ್ಮಿ ಮೊಬೈಲ್ ಸಿಕ್ಕಿದ್ದು, ಪೊಲೀಸರು ಈ ಮೊಬೈಲ್ ನಲ್ಲಿ ಇರೋ ಸಾಕ್ಷಿಗಳ ಪರಿಶೀಲನೆ ನಡೆಸ್ತಿದ್ದಾರೆ. ಹೀಗೆ ಒಂದು ಕಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ರೆ ಮತ್ತೊಂದು ಕಡೆ ಮೃತ ಮಹಾಲಕ್ಷ್ಮಿ ಕುಟುಂಬಸ್ಥರ ಕನಸಲ್ಲಿ ಬರ್ತಿದ್ದಾಳಂತೆ. ಸದ್ಯ ಮಹಾಲಕ್ಷ್ಮಿ ಅಸ್ತಿ ಸಂಗ್ರಹಿರೋ ಪತಿ ಹೇಮಂತ್ ದಾಸ್ ಆಕೆಯ ಮುಕ್ತಿಗೆ ರಾಮೇಶ್ವರಂಗೆ ತೆರಳಿದ್ದು ಅಲ್ಲಿಯೇ ಅಸ್ತಿ ವಿಸರ್ಜನೆ ಮಾಡ್ತಿದ್ದಾರೆ.