ಬೆಂಗಳೂರು:- ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಕೇಸ್ಗಳು ಅಧಿಕೃತವಾಗಿ ಎಸ್ಐಟಿಗೆ ವರ್ಗಾವಣೆ ಗೊಂಡಿದೆ.
ಬಿಕೆ ಸಿಂಗ್ ನೇತೃತ್ವದ ಎಸ್ಐಟಿ, ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.
ಬಾಗಲಕೋಟೆ-ವಿಜಯಪುರ ನಡುವೆ ರೈಲು ಸಂಚಾರ 4 ದಿನ ರದ್ದು: ಇಲ್ಲಿದೆ ಡೀಟೈಲ್ಸ್!
ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಈ ಸಂಬಂಧ ಎಸ್ಐಟಿ ಅರ್ಜಿ ಹಾಕಿಕೊಂಡಿದೆ. ಈ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.
ಈ ಮಧ್ಯೆ ಕಗ್ಗಲಿಪುರದಲ್ಲಿ ದಾಖಲಾಗಿರುವ ರೇಪ್ ಕೇಸ್ ಸಂಬಂಧ ಮುನಿರತ್ನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಮುನಿರತ್ನ ಪ್ರಕರಣಗಳನ್ನು ಎಸ್ಐಟಿಗೆ ವಹಿಸಿರೋದನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ.