ಚೆನ್ನೈ: ಖಿನ್ನತೆಯಿಂದ ಬಳಲುತ್ತಿದ್ದ 38 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಚೆನ್ನೈನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ತಿಕೇಯನ್ ತನಗೆ ತಾನೇ ವಿದ್ಯುತ್ ಪ್ರವಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ಗುರುವಾರ ಲೈವ್ ವೈರ್ಗೆ ಸಿಕ್ಕು ಬಿದ್ದಿರುವುದನ್ನು ಕಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೂಲತಃ ತಮಿಳುನಾಡಿನ ತೇಣಿ ಜಿಲ್ಲೆಯವರಾದ ಕಾರ್ತಿಕೇಯನ್, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಕಳೆದ 15 ವರ್ಷಗಳಿಂದ ಚೆನ್ನೈನ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದ. ಇತ್ತೀಚೆಗೆ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ.
Pitru Paksha 2024: ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..! ಪಿತೃ ದೋಷ ಬರುತ್ತೆ!
ಕಾರ್ತಿಕೇಯನ್ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಕುಟುಂಬ ಮತ್ತು ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು, ನಾವು ಆತ್ಮಹತ್ಯೆಗೆ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ಅವರು ಇತ್ತೀಚೆಗೆ ಹೊಸ ಕಂಪನಿಗೆ ಶಿಫ್ಟ್ ಆಗಿದ್ದರು. ಡೆತ್ನೋಟ್ನಲ್ಲಿ, ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಂದೇಶವನ್ನು ಬರೆದಿದ್ದಾರೆ.
ಘಟನೆ ವೇಳೆ ಕಾರ್ತಿಕೇಯನ್ ಮನೆಯಲ್ಲಿ ಒಬ್ಬರೇ ಇದ್ದರು. ಪತ್ನಿ ಕೆ.ಜಯರಾಣಿ ಸೋಮವಾರ ಚೆನ್ನೈನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ತಿರುನಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಮಕ್ಕಳನ್ನು ತನ್ನ ತಾಯಿಯಿದ್ದ ಮನೆಯಲ್ಲಿ ಬಿಟ್ಟಿದ್ದರು. ಗುರುವಾರ ರಾತ್ರಿ ವಾಪಸ್ ಬಂದು ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬೇರೆ ಕೀ ಬಳಸಿ ಮನೆ ಬಾಗಿಲು ತೆರೆದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.