ಚಾಮರಾಜನಗರ: ಕಾರಿನೊಳಗೆ ವ್ಯಕ್ತಿ ಶವ ಪತ್ತೆಯಾದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಜರುಗಿದೆ. ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆಯಾಗಿದೆ.
ನೀವು ಸ್ಲಿಮ್ ಆಗ್ಬೇಕಾ!? ಹಾಗಿದ್ರೆ ನಿಮ್ಮ ಲೈಫ್ ಸ್ಟೈಲ್ ಹೀಗೆ ಬದಳಿಸಿಕೊಳ್ಳಿ!
ಸುಮಾರು 40 ರಿಂದ 45 ವರ್ಷದ ವಯಸ್ಸಿನ ಶವ ಇದಾಗಿದ್ದು, ಸ್ವಿಪ್ಟ್ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಾರಿನ ಡೋರ್ ನಿಂದ ರಕ್ತ ಕೆಳಗಡೆ ಸುರಿದು ವಾಸನೆ ಬಂದದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ.
ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿರುವ ಶವ ಬನಿಯನ್ ಹಾಗೂ ಚಡ್ಡಿ ಧರಿಸುತ್ತದೆ. ದೇಹವು ಕೊಳೆತು ದುರ್ವಾಸನೆ ಬರುತ್ತಿದೆ. ಇದು ಕೊಲೆ ಎಂದು ಶಂಕಿಸಲಾಗಿದೆ.
ಸಿಪಿಐ ಶಿವಮಾದಯ್ಯ, ಎಸ್ಐ ಸುಪ್ರೀತ್, ಕ್ರೈಂ ಪಿಎಸ್ಐ ಚಲುವರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಿಮಿಸಿ ಪರಿಶೀಲಿಸುತ್ತಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.