ಚೆನ್ನೈ: ಶುಭಮನ್ ಗಿಲ್, ರಿಷಭ್ ಪಂತ್ ಶತಕ ನಂತರ ಅಶ್ವಿನ್ ಅವರ ಮಾರಕ ಬೌಲಿಂಗ್ನಿಂದ ಮೊದಲ ಟೆಸ್ಟ್ನಲ್ಲಿ ಭಾರತ ಬಿಗಿ ಹಿಡಿತ ಹೊಂದಿದ್ದು, ಬಾಂಗ್ಲಾದೇಶಕ್ಕೆ ಗೆಲ್ಲಲು 515 ರನ್ಗಳ ಕಠಿಣ ಸವಾಲನ್ನು ನೀಡಿದೆ. 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದಾಗ ಭಾರತ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ 158 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.
Condoms Problems: ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಹರಿದ್ರೆ ತಕ್ಷಣ ಹೀಗೆ ಮಾಡಿ..!
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಹೊಡೆದರೂ ವಿಕೆಟ್ ಪಡೆಯದ ಅಶ್ವಿನ್ ಎರಡನೇ ಇನ್ನಿಂಗ್ಸ್ ಮೂರು ವಿಕೆಟ್ ಪಡೆಯುವ ಮೂಲಕ ಬಾಂಗ್ಲಾ ಬ್ಯಾಟಿಂಗ್ ಶಕ್ತಿಯನ್ನು ಧ್ವಂಸ ಮಾಡಿದ್ದಾರೆ. ಇನ್ನೂ ಎರಡು ದಿನದ ಆಟ ಬಾಕಿ ಉಳಿದಿದ್ದು 6 ವಿಕೆಟ್ ಸಹಾಯದಿಂದ ಬಾಂಗ್ಲಾ 357 ರನ್ ಗಳಿಸಬೇಕಿದೆ. ಬಾಂಗ್ಲಾ ಪರ ಝಕೀರ್ ಹಸನ್ 33 ರನ್, ಶಾದ್ಮನ್ ಇಸ್ಲಾಂ 35 ರನ್ ಹೊಡೆದರೆ ನಾಯಕ ನಜ್ಮುಲ್ ಹೊಸೈನ್ ಔಟಾಗದೇ 51 ರನ್ (60 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶತಕದಾಟ:
ಎರಡನೇ ದಿನ 33 ರನ್ ಗಳಿಸಿದ್ದ ಶುಭಮನ್ ಗಿಲ್ ಮತ್ತು 12 ರನ್ ಗಳಿಸಿದ್ದ ರಿಷಭ್ ಪಂತ್ ಶತಕ ಬಾರಿಸಿದರು. ಇಬ್ಬರೂ 4ನೇ ವಿಕೆಟಿಗೆ 217 ಎಸೆತಗಳಲ್ಲಿ 167 ರನ್ ಜೊತೆಯಾಟವಾಡಿದರು. ಏಕದಿನ ಶೈಲಿಯಂತೆ ಬ್ಯಾಟ್ ಬೀಸಿದ ರಿಷಭ್ ಪಂತ್ 128 ಎಸೆತಗಳಲ್ಲಿ 109 ರನ್ (13 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರೆ ಶುಭಮನ್ ಗಿಲ್ ಔಟಾಗದೇ 119 ರನ್ (176 ಎಸೆತ, 10 ಬೌಂಡರಿ, 4 ಸಿಕ್ಸರ್) ಹೊಡೆದರು. ಕೆಎಲ್ ರಾಹುಲ್ ಔಟಾಗದೇ 22 ರನ್ (19 ಎಸೆತ, 4 ಬೌಂಡರಿ) ಹೊಡೆದರು. ಮುರಿಯದ 5ನೇ ವಿಕೆಟಿಗೆ ಗಿಲ್ ಮತ್ತು ರಾಹುಲ್ 51 ಎಸೆತಗಳಲ್ಲಿ 53 ರನ್ ಹೊಡೆಯುವ ಮೂಲಕ ಬಾಂಗ್ಲಾಗೆ ದೊಡ್ಡ ಗುರಿಯನ್ನು ನೀಡಿದರು.