ಹುಬ್ಬಳ್ಳಿ: ಸದ್ಯದ ಪರಿಸ್ಥಿತಿಯಲ್ಲಿ ಅನ್ನದಾತ ಸಂಕಷ್ಟದಲ್ಲಿದ್ದು ಸರಕಾರ ಈ ಬಗ್ಗೆ ಗಮನಹರಿಸಬೇಕು. ಬೆಳೆ ಪರಿಹಾರ,ವಿಮೆ ಗಣವನ್ನು ರೈತರಿಗೆ ಸಕಾಲಕ್ಕೆ ತಲುಪಿಸಬೇಕು ಎಂದು ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾದ್ಯಕ್ಷ ಹೇಮನಗೌಡ ಬಸನಗೌಡ್ರ ಆಗ್ರಹಿಸಿದರು.
ಹಸು ಅಥವಾ ಮೇಕೆ ಹಾಲು ಇದರಲ್ಲಿ ಯಾವುದು ಬೆಸ್ಟ್!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ರತ್ನ ಭಾರತ ರೈತ ಸಮಾಜದ ಗ್ರಾಮ ಘಟಕ ಉದ್ಘಾಟಿಸಿ,೧೪ ಜನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ ನಂತರ ಮಾತನಾಡಿದರು. ಮುಂಗಾರು, ಬೆಳೆಗಳಾದ ಹೆಸರು,ಉದ್ದು ಸೇಂಗಾ ಹಾಳಾಗಿ ಹೋಗಿದ್ದು ಸತತ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.ಹಿಂಗಾರು ಬೆಳೆಗೂ ಇದೇ ಪರಸ್ಥಿತಿ ಬರಬಾರದು. ರೈತರ ಸಮಸ್ಯೆಗಳಿಗೆ ಸರಕಾರ ಸ್ಫಂದಿಸಿ ಸಕಾಲಕ್ಕೆ ಬೆಳೆ ವಿಮೆ ಮಂಜೂರ ಮಾಡಬೇಕು. ಬ್ಯಾಂಕುಗಳಿಂದ ಪಡೆದ ಬೆಳೆ ಸಾಲವನ್ನು ಮರಳಿ ಪಡೆಯಲು ವಿಧಿಸುವ ಮಾನದಂಡಗಳನ್ನು ಪರಿಶೀಲಿಸಬೇಕು. ಅನಗತ್ಯವಾಗಿ ಖಾಸಗಿ ಬ್ಯಾಂಕುಗಳು ರೈತರಿಗೆ ತೊಂದರೆ ಕೂಡಬಾರದು ಎಂದರು.
ಗ್ರಾಮದ ಸಮಸ್ಯೆಗಳ ಕುರಿತು ನಮ್ಮ ಗಮನಕ್ಕೆ ತಂದರೆ, ಜಿಲ್ಲಾಧಿಕಾರಿಗಳಬಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು,ರಸ್ತೆ,ನೀರು,ಹೊಲಕ್ಕೆ ಹೋಗುವ ರಸ್ತೆಗಳ ಸುಧಾರಣೆಗೆ ಸರಕಾರದ ಮಟ್ಟದಲ್ಲಿ ಗಮನಸೆಳೆಯಲು ಸಂಘಟನೆ ಸಿದ್ದವಾಗಿರಬೇಕು ಎಂದು ಹೇಮನಗೌಡ ಬಸನಗೌಡ್ರ ಕರೆ ನೀಡಿದರು.
ನೂತನ ಗ್ರಾಮ ಘಟಕದ ಅದ್ಯಕ್ಷರಾಗಿ ವಿರೂಪಾಕ್ಷಿ ಬಸವಣ್ಣೆಪ್ಪ ಗಣಿ ಆಯ್ಕೆಯಾದರು.ಗ್ರಾಮ ಪಂಚಾಯತಿ ಸದಸ್ಯರಾದ ಗುರುನಾಥ ಹೊನ್ನಿಹಳ್ಳಿ,ವಿಠಲ ಘಾಟಗೆ,ಯಲ್ಲಪ್ಪ ಬಾರಕೇರ ಸಂಘಟನೆಗೆ ಬೆಂಬಲ ಸೂಚಿಸಿ ತಮ್ಮ ಸಹಕಾರ ಇದೆ ಎಂದರು. ನೂತ ಪದಾಧಿಕಾರಿಗಳಾಗಿ ಸದಾನಂದ ಪೂಜಾರ,ರವಿ ಓದು,ಪ್ರಮೋದ ಹುಚ್ಚೋಗಿ,ಮರ್ದಾನ್ ಬದಾಪ್,ಮುದುಕಪ್ಪ ಗಣಿ,ನಿಂಗಪ್ಪ ದಂಡಿನ,ಹನಮರಡ್ಡಿ ಇಟಗಿ,ನವೀನರಡ್ಡಿ ಸಂಶಿ,ಮಹೇಶ ಪೂಜಾರ, ರೈಮಬಸಾನ ನದಾಪ್ ನೇಮಕಗೊಂಡರು.
ನೂತನ ಪದಾಧಿಕಾರಿಗಳಿಗೆ ಇದೇ ವೇಳೆ ಆಯ್ಕೆ ಪ್ರಮಾಣ ಪತ್ರ ವಿತರಿಸಲಾಯಿತು.