ಬೆಂಗಳೂರು:- ಅತ್ಯಾಚಾರ ಕೇಸ್ ನಲ್ಲಿ ಬಂಧನವಾಗಿರುವ ಶಾಸಕ ಮುನಿರತ್ನ ಮತ್ತೆ ಜೈಲುಪಾಲಾಗಿದ್ದಾರೆ. ಪೊಲೀಸರ ತನಿಖೆಯ ವೇಳೆ ಶಾಸಕ ಸ್ಫೋಟಕ ಮಾಹಿತಿಗಳನ್ನ ನೀಡಿದ್ದಾರೆ. ಹಾಗಾದ್ರೆ ಶಾಸಕನ ಬಂಧನ ಪ್ರಕರಣದಲ್ಲಿ ಇವತ್ತು ಏನೆಲ್ಲಾ ಆಯ್ತು ಎಂಬುದನ್ನು ಹೇಳ್ತಿವಿ ನೋಡಿ.
ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ಸಚಿವ ರಾಮಲಿಂಗಾರೆಡ್ಡಿ
ಶಾಸಕ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿದ್ದು, ಶಾಸಕ ಮುನಿರತ್ನರನ್ನ ಕಗ್ಗಲಿಪುರ ಪೊಲೀಸರು ನಿನ್ನೆ ಮುಂಜಾನೆ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂಧಿಸಿದ್ದರು.ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸರು ಶಾಸಕ ಮುನಿರತ್ನರನ್ನ ವಿಚಾರಣೆ ನಡೆಸಿದಾಗ ಸ್ಫೋಟಕ ಹೇಳಿಕೆಗಳನ್ನ ತನಿಖಾಧಿಕಾರಿಗಳ ಮುಂದೆ ಕೊಟ್ಟಿದ್ದಾರೆ. ದೂರುದಾರೆ ನನಗೆ ಪರಿಚಯ ಇದ್ದಾಳೆ.ದೂರುದಾರೆಯ ವೃತ್ತಿಯೇ ಹನಿಟ್ರ್ಯಾಪ್ ಮಾಡೋದು.ಆಕೆಯೇ ಹನಿಟ್ರ್ಯಾಪ್ ಮಾಡಿ ನನಗೆ ವಿಡಿಯೋ ತೋರಿಸ್ತಿದ್ಲು.ಆಕೆ ಹನಿಟ್ರ್ಯಾಪ್ ಮಾಡಿ ಸಾಕಷ್ಟು ವೀಡಿಯೊಗಳನ್ನ ಇಟ್ಕೊಂಡಿದ್ದಾಳೆ,
ನಿಮಗೆ ಯಾರ ವಿಡಿಯೋ ಬೇಕು ಹೇಳಿ.ನಿಮ್ಮ ದುಷ್ಮನ್ ಯಾರಿದ್ದಾರೆ ಹೇಳಿ ಅವ್ರ ವಿಡಿಯೋ ಮಾಡಿಕೊಡ್ತೀನಿ ಅಂದಿದ್ಲು, ಆದರೆ ಅವಳ ಆಫರ್ ಗೆ ನಾನು ಒಪ್ಪಿರಲಿಲ್ಲ, ನನಗೆ ಹಣ ಅಧಿಕಾರದ ಮೋಹವಿಲ್ಲ, ನಾನೇಕೆ ವಿಡಿಯೋ ಮಾಡಿಸಲಿ ಎಂದಿದ್ದಾರಂತೆ ಮುನಿರತ್ನ. ಇನ್ನೂ ಏಡ್ಸ್ ಪೀಡಿತೆ ಯಾರು ಅನ್ನೋದು ನನಗೆ ಗೊತ್ತೇ ಇಲ್ಲ. ಆಕೆಯೇ ಎಲ್ಲಾ ಹನಿಟ್ರ್ಯಾಪ್ ವಿಡಿಯೋಗಳನ್ನ ಮಾಡಿ ನನ್ನ ಮೇಲೆ ಸುಳ್ಳು ದೂರು ನೀಡಿದ್ದಾಳೆ ಎಂದು ಶಾಸಕ ಮುನಿರತ್ನ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಶಾಸಕ ಮುನಿರತ್ನರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಲಾಯ್ತು. ಅಕ್ಟೋಬರ್ ೫ ರತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಿದ ಜನಪ್ರತಿನಿಧಿ ಆದೇಶ ನೀಡಿದೆ. ಶಾಸಕ ಮುನಿರತ್ನರನ್ನ ಹನ್ನೊಂದು ಗಂಟೆಗೆ ಜನಪ್ರತಿದಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಕಗ್ಗಲಿಪುರ ಪೊಲೀಸರು ಹಾಜರು ಪಡಿಸಿದ್ರು.ನ್ಯಾಯಾದೀಶರ ಮ್ಯಾನ್ಯುಯಲ್ ಯಾಕೆ ಸರಿಯಾಗಿ ಪಾಲಿಸಿಲ್ಲ ಎಂದು ಆರಂಭದಲ್ಲಿ ಪೊಲೀಸರಿಗೆ ಜಡ್ಜ್ ತರಾಟೆಗೆ ತಗೆದುಕೊಂಡರು.ಆಗ ಮುನಿರತ್ನ ಪರ ವಕೀಲ ಮಧ್ಯಪ್ರವೇಶ ಮಾಡಿ ದೂರುದಾರೆ ಠಾಣೆಗೆ ಬಂದು ದೂರು ನೀಡಿಲ್ಲ. ಎಫ್ ಐಆರ್ ಪ್ರತಿಯಲ್ಲಿ ದೂರುದಾರೆಯ ಸಹಿ ಇದೆ. ಎಫ್ ಐ ಆರ್ ದಾಖಲಾಗುವುದಕ್ಕೂ ಮುನ್ನ ಎಫ್ ಐಆರ್ ಪ್ರತಿಯಲ್ಲಿರುವ ಮಾಹಿತಿ ಮಾಧ್ಯಮದಲ್ಲಿ ಬಿತ್ತರವಾಗಿದೆ. ರಾಜಕೀಯವಾಗಿ ಕಟ್ಟಿಹಾಕಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದರು.
ಶಾಸಕ ಮುನಿರತ್ನಗೆ ಆರೋಗ್ಯ ಸಮಸ್ಯೆ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದಾಗ ಹರ್ನಿಯಾ ಹೃದಯ ಸಂಬಂಧಿ ಸಮಸ್ಯೆ ಇದೆ. ಜಯದೇವಕ್ಕೆ ಕರೆದುಕೊಂಡು ಹೋಗಿದ್ದರಾ ಬಗ್ಗೆ ನ್ಯಾಯಾದೀಶರ ಮುಂದೆ ಮುನಿರತ್ನ ಮಾಹಿತಿ ನೀಡಿದರು.ಬಳಿಕ ಸ್ವಾಮಿ ನನ್ನ ಬಳಿ ಇದ್ದವರನ್ನೆ ಬಳಸಿಕೊಂಡು ದೂರುಗಳ ಮೇಲೆ ದೂರು ದಾಖಲಿಸಿ ಒಂದು ಕೇಸ್ ಮುಗಿದ ಬಳಿಕ ಮತ್ತೊಂದು ಕೇಸ್ ನಲ್ಲಿ ಒಳಗೆ ಕಳಿಸಿ ಕಿರುಕುಳ ಕೊಡಲಾಗುತ್ತಿದೆ.
ನಾನು ನಾಲ್ಕು ಬಾರಿ ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ್ದವನಾಗಿದ್ದಿನಿ. ಶಾಸಕನಿದ್ದಿನಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂದರೆ ನಾನು ನಿಮ್ಮ ಎದುರಲ್ಲೆ ಕೊಡುತ್ತೇನೆ, ಕಿರುಕುಳ ಕೊಡುವುದನ್ನ ನಿಲ್ಲಿಸಲಿ ಎಂದು ಮನವಿ ಶಾಸಕ ಮುನಿರತ್ನ ಮನವಿ ಮಾಡಿಕೊಂಡರು. ಇದಕ್ಕೆ ಜಡ್ಜ್ ನೀವು ಎಲ್ಲಿ ರಾಜೀನಾಮೆ ಕೊಡಬೇಕೋ ಅಲ್ಲಿ ಕೊಡಿ ಎಂದು ಹೇಳಿ 14 ದಿನ ನ್ಯಾಯಾಂಗ ಬಂಧನದ ಆದೇಶ ನೀಡಿದ್ರು. ಒಟ್ಟಾರೆಯಾಗಿ ಮುನಿರತ್ನಗೆ ಒಂದರ ಮೇಲೆ ಒಂದರಂತೆ ಸಂಕಷ್ಟ ಎದುರಾಗುತ್ತಿದ್ದು, ಮುಂದೆ ಯಶವಂತಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಾರೆ. ಆಗ ಕೇಸ್ ನ ಮತ್ತಷ್ಟು ಅಂಶಗಳು ಬಯಲಿಗೆ ಬರಬೇಕಿದೆ.