ಬೆಂಗಳೂರು: ತಿರುಪತಿ ಲಡ್ಡು (Tirupathi Laddu) ವಿವಾದವಾದ ಬೆನ್ನಲ್ಲೇ, ರಾಜ್ಯ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಲ್ಲೇಶ್ವರಂ ಟಿಟಿಡಿ (Malleshwaram TTD) ದೇವಸ್ಥಾನದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಿಸುತ್ತೇನೆ. ನಮ್ಮ ರಾಜ್ಯ 99% ದೇವಾಲಯಗಳು ನಂದಿನಿ ತುಪ್ಪವನ್ನೆ ಬಳಸಿಕೊಳ್ಳುತ್ತಾ ಇದ್ದಾರೆ. ಜನರಿಗೆ ಸಂಶಯ ಬೇಡ ಅಂತಾ ನಂದಿನಿ ತುಪ್ಪ ಬಳಕೆ ಮಾಡಬೇಕು ಅಂತಾ ಆದೇಶ ಮಾಡಿದ್ದೇವೆ. ಕೇಂದ್ರದ ಮಂತ್ರಿ ಒಬ್ಬರು ಪ್ರಸಾದ ಟೆಸ್ಟ್ ಮಾಡಬೇಕು ಅಂತಾ ಹೇಳಿದ್ದಾರೆ. ನನ್ನ ಅಭಿಪ್ರಾಯ ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ ಎಂದಿದ್ದಾರೆ.