ಬೆಂಗಳೂರು:– ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ನನ್ನ ಸಂಬಂಧಿ ಅಂತಾ ಹೇಳಿ ಯುವಕನೋರ್ವ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದೆ.
ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ: ಬೆಂಗಳೂರಲ್ಲಿ ಕಣ್ಮರೆಯಾದ ಹಾಪ್ ಕಾಮ್ಸ್!
ಪುನೀತ್ ಮೇಲೆ 21 ವರ್ಷದ ಯುವಕ ವರುಣ್ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪುನೀತ್ ಅವರು ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಲೆಯ ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್ಮೆಂಟ್ಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಯುವಕ ವರುಣ್ ಅಪಾರ್ಟ್ಮೆಂಟ್ಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಕರೆತಂದಿದ್ದ. ಯುವತಿಯರನ್ನು ಕರೆದುಕೊಂಡು ಬಂದ ಹಿನ್ನೆಲೆ ಅನುಮಾನಗೊಂಡ ಸೆಕ್ಯೂರಿಟಿ ಗಾರ್ಡ್ ಪುನೀತ್, ರಾತ್ರಿ 12 ಗಂಟೆ ನಂತರ ಅಪರಿಚಿತರಿಗೆ ಪ್ರವೇಶವಿಲ್ಲ ಎಂದು ಯುವಕನಿಗೆ ಖಡಕ್ ಆಗಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ವರುಣ್, ಹಲ್ಲೆ ನಡೆಸಿದ್ದಾನೆ. ನಾನು ಯಾರ್ ಗೊತ್ತಾ? ಡಿಸಿಪಿ ಮಗ. ಸಿಎಂ ಸಿದ್ದರಾಮಯ್ಯ ನನ್ನ ಸಂಬಂಧಿ ಎಂದು ಹೇಳಿ ವರುಣ್, ಪುನೀತ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಮತ್ತೊಂದೆಡೆ ಅಪಾರ್ಟ್ಮೆಂಟ್ ರೂಲ್ಸ್ ಪ್ರಕಾರ ನಡೆದರೂ ಹಲ್ಲೆ ಮಾಡಿದ್ದಾರೆ. ಕಿವಿ ಪರದೆ ಹರಿದು ಹೋಗುವ ಹಾಗೆ ಹಲ್ಲೆ ಮಾಡಲಾಗಿದೆ. ನನ್ನ ಕಿವಿ ಕೇಳಿಸುತ್ತಿಲ್ಲ ಎಂದು ಪುನೀತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮೇಲೆ ಕಪಾಳ ಮೋಕ್ಷ ಮಾಡುವ ವಿಡಿಯೋ ರಿಕಾರ್ಡ್ ಆಗಿದೆ. ಅಲ್ಲೇ ಇದ್ದ ಸ್ಥಳೀಯರು ಹಲ್ಲೆ ವಿಡಿಯೋ ರಿಕಾರ್ಡ್ ಮಾಡಿದ್ದಾರೆ