ಅರಿಶಿನ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ, ಭಾರತೀಯ ಸಂಸ್ಕೃತಿಯಲ್ಲಿ ತುಂಬಾ ಪವಿತ್ರವೆಂದು ಕೂಡ ಪರಿಗಣಿಸಲಾಗಿರುವಂತದ್ದು. ಇದನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಬಳಸಿ, ಅದರಿಂದ ಸಿಗುವ ಆರೋಗ್ಯ ಲಾಭಗಳನ್ನು ಪಡೆಯುವರು.
ಬೆಳಗ್ಗೆ ಎದ್ದ ತಕ್ಷಣ ಖಾಲಿ ನೀರು ಕುಡಿಯುವ ಬದಲು ಲವಂಗದ ನೀರು ಕುಡಿದು ನೋಡಿ!
ಅದೇ ರೀತಿ ಅರಿಶಿನ ಬಳಸಿ ದೇಹದಲ್ಲಿರುವ ಹೆಚ್ಚುವರಿ ತೂಕ ಇಳಿಸಬಹುದು. ಹೌದು, ಅರಶಿನ ಬಳಸಿದರೆ ಅದರಿಂದ ನಮ್ಮ ದೇಹದಲ್ಲಿನ ಹೆಚ್ಚುವರಿ ತೂಕ ಇಳಿಸಬಹುದು. ಇದರಿಂದ ದೇಹವನ್ನು ಸಮತೋಲಿತ, ಆರೋಗ್ಯಕಾರಿ ಆಗಿ ಇಡಬಹುದು.ಆದರೆ ಅತಿಯಾದ ಅರಿಶಿನ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಜಠರಗರುಳಿನಲ್ಲಿ ನೋವು, ರಕ್ತ ತೆಳುವಾಗುವುದು ಮತ್ತು ಯಕೃತ್ತಿನ ಕಾಯಿಲೆ ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
ಅತಿಯಾದ ಅರಿಶಿನ ಸೇವನೆ ಮಾಡುವುದರಿಂದ ಕಿಬ್ಬೊಟ್ಟೆಯ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್, ಆಸಿಡ್ ರಿಫ್ಲಕ್ಸ್ ಮತ್ತು ಹಳದಿ ಮಲದಂತಹ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗೆ ಕಾರಣವಾಗಬಹುದು.
ಕೂದಲಿನ ಬೆಳವಣಿಗೆಗೆ ಮತ್ತು ಸುಂದರ ಚರ್ಮವನ್ನು ಕಾಪಾಡಿಕೊಳ್ಳಲು ಅರಿಶಿನವನ್ನು ಬಳೆಕೆ ಮಾಡಲಾಗುತ್ತದೆ. ಆದರೆ ಇದು ಹೆಚ್ಚಾಗಿ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಅರಿಶಿನವನ್ನು ಬಳಕೆ ಮಾಡಿರುವ ಉತ್ಪನ್ನಗಳು ಅತಿಯಾಗಿ ಬಳಸುವುದರಿಂದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಇದು ಕೆಲವರಲ್ಲಿ ಚರ್ಮದ ಅಲರ್ಜಿಗೆ ಕಾರಣವಾಗಬಹುದು.