ಗರ್ಭಾವಸ್ಥೆಯ ಸಮಯದಲ್ಲಿ ಸಾಮಾನ್ಯವಾಗಿ ತಾಯಿಯ ಆರೋಗ್ಯ ಅತ್ಯಂತ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಹೆಚ್ಚು ಜಾಗ್ರತೆ ಹಾಗೂ ಕಾಳಜಿಯನ್ನು ವಹಿಸಬೇಕು. ಹಾಗಿದ್ದರೂ ಕೆಲವು ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯವು ಹೆಚ್ಚು ಆರೋಗ್ಯದಿಂದ ಕೂಡಿರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಸಣ್ಣ ಆರೋಗ್ಯ ಸಮಸ್ಯೆಗಳನ್ನು ತಾಯಿ ಸಹಿಸಿಕೊಳ್ಳಬೇಕು. ಅಂತಹ ಸಮಯದಲ್ಲಿ ಯಾವುದೇ ವಿಶೇಷ ಔಷಧಿ ಅಥವಾ ಚಿಕಿತ್ಸೆ ನೀಡಲಾಗುವುದಿಲ್ಲ. ಏಕೆಂದರೆ ಅದು ಮಗುವಿನ ಆರೋಗ್ಯದ ಮೇಲೆ ಹಾನಿ ಉಂಟುಮಾಡುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ತಾಯಿ ಗರ್ಭಧರಿಸಿರುವಾಗ ಸರಿಯಾದ ಕಾಳಜಿ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಈ ಕಾರಣದಿಂದಲೇ ಕೆಲವರು ವ್ಯಾಯಾಮ ಮಾಡಲು ಹಿಂಜರಿಯುತ್ತಾರೆ. ವ್ಯಾಯಾಮದಿಂದ ಅಕಾಲಿಕ ಹೆರಿಗೆ ಅಥವಾ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಎನ್ನುವ ಭಯಕ್ಕೆ ಒಳಗಾಗಿರುತ್ತಾರೆ.
ಬೆಳಗ್ಗೆ ಎದ್ದ ತಕ್ಷಣ ಖಾಲಿ ನೀರು ಕುಡಿಯುವ ಬದಲು ಲವಂಗದ ನೀರು ಕುಡಿದು ನೋಡಿ!
ಗರ್ಭಾವಸ್ಥೆಯಲ್ಲಿ ವ್ಯಾಯಾಮ ಎಂದರೆ ದೇಹವನ್ನು ಅತಿಯಾಗಿ ದಂಡಿಸುವುದಲ್ಲ. ಯಾವ ಬಗೆಯ ಆಸನ, ವ್ಯಾಯಾಮ ಅಥವಾ ತಾಲೀಮು ಮಾಡುವುದರಿಂದ ಮಗುವಿನ ಮತ್ತು ತಾಯಿಯ ಆರೋಗ್ಯದಲ್ಲಿ ಸುಧಾರಣೆ ಆಗುವುದು ಎನ್ನುವುದನ್ನು ತಿಳಿಯಬೇಕು. ನಂತರ ವೈದ್ಯರಲ್ಲಿ ಸರಿಯಾದ ಸಲಹೆ ಪಡೆಯುವುದರ ಮೂಲಕ ವ್ಯಾಯಾಮವನ್ನು ಮಾಡಬೇಕು. ಆಗ ವ್ಯಾಯಾಮದಿಂದ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಅಹಿತಕರ ಸಂಗತಿ ಸಂಭವಿಸುವುದಿಲ್ಲ.
ಲಘುವಾದ ವ್ಯಾಯಾಮ, ಗರ್ಭಾವಸ್ಥೆಯಲ್ಲಿ ಇರುವಾಗ ಮಾಡಬಹುದಾದ ವ್ಯಾಯಾಮ, ನಡಿಗೆ ಮತ್ತು ಸೂಕ್ತ ಯೋಗಾಸನಗಳು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುತ್ತವೆ. ವಿಶೇಷವಾಗಿ ತಾಯಿಯ ದೇಹದಲ್ಲಿ ಸುಧಾರಿತ ರೀತಿಯಲ್ಲಿ ರಕ್ತ ಪರಿಚಲನೆ ಉಂಟಾಗುವುದು. ಮಲಬದ್ಧತೆ, ನಿದ್ರಾಹೀನತೆ, ಉದ್ವೇಗ, ಉರಿಯೂತ, ರಕ್ತನಾಳಗಳ ಸಮಸ್ಯೆ ಹಾಗೂ ಮಾಂಸ ಕಂಡಗಳ ಆರೋಗ್ಯವು ಸುಧಾರಿಸುವುದು. ಮಗುವಿನ ಬೆಳವಣಿಗೆ ಸರಿಯಾಗಿ ನಡೆಯುವುದು. ತಾಯಿಗೆ ಪ್ರಸವದ ಸಮಯದಲ್ಲಿ ಯಾವುದೇ ತೊಂದರೆ ಉಂಟಾಗದು.