ಚಾಮರಾಜನಗರ:– ಚಿಕ್ಕಪ್ಪನ ಕ್ರಷರ್ಗೆ ಹೋಗಲು ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ಗಣೇಶ್ ಪ್ರಸಾದ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ರಸ್ತೆಯಿಂದ ಜಮೀನುಗಳಲ್ಲಿ ಬೆಳೆದಿದ್ದ ಹುರುಳಿ, ಸೂರ್ಯಕಾಂತಿ, ಜೋಳ ಮತ್ತಿತ್ತರ ಬೆಳೆ ನಾಶವಾಗಿದೆ. ಬಂಡೀದಾರಿ ಹೆಸರಿನಲ್ಲಿ ಸುಮಾರು 2 ಕಿಮೀ ರಸ್ತೆ ನಿರ್ಮಿಸಲಾಗಿದೆ. ನಾವ್ಯಾರು ಬಂಡೀ ದಾರಿ ನಿರ್ಮಿಸಿ ಎಂದು ಕೇಳಿಲ್ಲ. ಆದರೂ ಕೂಡ ಶಾಸಕರ ಚಿಕ್ಕಪ್ಪ ನಂಜುಂಡ ಪ್ರಸಾದ್ಗೆ ಸೇರಿದ ಕ್ರಷರ್ಗೆ ದಾರಿ ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ರಸ್ತೆ ನಿರ್ಮಿಸಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಸ್ತೆ ನಿರ್ಮಿಸುವ ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ಭೇಟಿ ಕೊಟ್ಟಿದ್ದರು. ಈ ವೇಳೆ ರೈತರು ತಹಶೀಲ್ದಾರ್ಗೆ ತರಾಟೆ ತೆಗೆದುಕೊಂಡರು. ನಮಗೆ ಇಲ್ಲಿರುವುದೇ ಅರ್ಧ, ಒಂದು ಎಕರೆ ಜಮೀನು. ರಸ್ತೆ ನಿರ್ಮಾಣ ಮಾಡಿದರೆ ನಮಗೆ ಜಮೀನು ಉಳಿಯಲ್ಲ. ಅಲ್ಲದೇ ಕ್ರಷರ್ ಲಾರಿಗಳ ಸಂಚಾರದಿಂದ ಧೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತದೆ. ಹಿಂದೆ 2018 ರಲ್ಲೂ ಕೂಡ ರಸ್ತೆ ನಿರ್ಮಿಸಲು ಹೊರಟಾಗ ರೈತರು ತಡೆಗಟ್ಟಿದ್ದರು.ಇದೀಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅಧಿಕಾರದ ಬಲದಿಂದ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆಂದು ಸ್ಥಳೀಯ ರೈತರು ಆರೋಪ ಮಾಡುತ್ತಿದ್ದಾರೆ.