ವಿಜಯಪುರ ಜಿಲ್ಲೆಯ ಲಿಂಬೆ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಪ್ರತಿ ಮಳೆಗಾಲದಲ್ಲಿಯೂ ಕನಿಷ್ಟ ದರ ಲಿಂಬೆಗೆ ಇರುತ್ತಿತ್ತು. ಸುಮಾರು ಒಂದು ಸಾವಿರ ಲಿಂಬೆ ಇರುತ್ತಿದ್ದ ಮೂಟೆ ಮಳೆಗಾಲದಲ್ಲಿ 1000 ರಿಂದ 1200 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಕಷ್ಟಪಟ್ಟು ಬೆಳೆದು ಕೂಲಿಯಾಳುಗಳ ಖರ್ಚು ಸಹ ಮಳೆಗಾಲದಲ್ಲಿ ಲಿಂಬೆಗೆ ಬರುತ್ತಿರಲಿಲ್ಲ. ಆದರೂ ಫಸಲು ಬಿಡಬಾರದೆಂಬ ಕಾರಣದಿಂದ ಕಡಿಮೆ ದರಕ್ಕೆ ಮಾರಾಟ ಮಾಡುವುದು ಬೆಳೆಗಾರರಿಗೆ ಅನಿವಾರ್ಯವಾಗಿತ್ತು. ಈ ಬಾರಿ ಲಿಂಬೆಗೆ ಡಿಮ್ಯಾಂಡ್ ಬಂದಿದ್ದು, ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ.
ಮಾರುಕಟ್ಟೆಗಳಲ್ಲಿ ಒಂದು ಸಾವಿರ ಲಿಂಬೆ ಇರುವ ಮೂಟೆ 1000 ದಿಂದ 1200 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿತ್ತು. ಕಳೆದ 20 ವರ್ಷಗಳ ಸರಾಸರಿ ತೆಗೆದಾಗ ಪ್ರತಿ ವರ್ಷ ಜೂನ್ನಿಂದ ಫೆಬ್ರವರಿವರೆಗೂ 800 ರಿಂದ 1200 ರೂಪಾಯಿಗೆ ಮಾತ್ರ ಲಿಂಬೆ ಮಾರಾಟವಾದ ದಾಖಲೆಗಳಿವೆ. ಆದರೆ, ಈ ಬಾರಿ ಲಿಂಬೆ ಬೆಳೆಗಾರರ ಅದೃಷ್ಟ ಖುಲಾಯಿಸಿದೆ ಎನ್ನಬಹುದು.
ರೈತರಿಗೆ ಸಂತಸದ ಸುದ್ದಿ: ಮೋದಿ ಸರ್ಕಾರದಿಂದ ಸಿಕ್ಕಿದೆ ಬಿಗ್ ಅಪ್ ಡೇಟ್!
ಜಿಲ್ಲೆಯ ಕಾಗ್ಜಿ ನಿಂಬೆ ಜಿಐ ಟ್ಯಾಗ್ ಮಾನ್ಯತೆಗೆ ಪಾತ್ರವಾಗಿದೆ. ಜಿಐ ಟ್ಯಾಗ್ ಪಡೆದ ಕಾರಣ ವಿದೇಶಗಳಿಂದಲೂ ವಿಜಯಪುರ ಜಿಲ್ಲೆಯ ಲಿಂಬೆಗೆ ಬೇಡಿಕೆ ಹೆಚ್ಚಿದೆ. ಸೌದಿ ಅರೇಬಿಯಾ, ವಿಯೇಟ್ನಾಂ ಸೇರಿದಂತೆ ಇತರೆ ದೇಶಗಳಿಂದ ವಿಜಯಪುರ ಜಿಲ್ಲೆಯ ಲಿಂಬೆಗೆ ಬೇಡಿಕೆ ಬಂದಿದೆ. ಪ್ರತಿ ವರ್ಷ ಈ ಸಮಯದಲ್ಲಿ ಕಡಿಮೆ ಬೆಲೆ ಇರುತ್ತಿತ್ತು. ಜಿಐ ಟ್ಯಾಗ್ ಪಡೆದಿದ್ದರಿಂದ ಅನ್ಯ ದೇಶಗಳಿಂದ ಲಿಂಬೆಗೆ ಆರ್ಡರ್ ಬರುತ್ತಿವೆ. ಹಾಗಾಗಿ ಲಿಂಬೆಯ ದರ ಏರಿಕೆಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಸದ್ಯ ಮಳೆಗಾಲವಿದ್ದರೂ ಜಿಲ್ಲೆಯ ಲಿಂಬೆ ಹೆಚ್ಚಿದ ದರಕ್ಕೆ ಮಾರಾಟವಾಗುತ್ತಿದೆ. ಕಡಿಮೆ ಇಳುವರಿ ಒಂದು ಕಾರಣವಾದರೆ, ಅದಕ್ಕಿಂತ ಪ್ರಮುಖವಾಗಿ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್ ಸಿಕ್ಕಿರೋದು ಜಾಗತೀಕ ಮಟ್ಟದಲ್ಲಿ ವಿಜಯಪುರದ ಲಿಂಬೆ ಪ್ರಖ್ಯಾತಿಗೆ ಪಾತ್ರವಾಗಿದೆ. ಈ ಕಾರಣದಿಂದ ವಿವಿಧ ದೇಶಗಳಿಂದ ಇಲ್ಲಿಯ ಲಿಂಬೆಗೆ ಬೇಡಿಕೆ ಬಂದಿದೆ. ಉತ್ತಮ ದರ ಬಂದಿದ್ದು, ಲಿಂಬೆಯ ಬೆಳೆಗಾರರಿಗೆ ಲಾಟರಿ ಹೊಡೆದಂತಾಗಿದೆ.