ಬೆಂಗಳೂರು: ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ದಕ್ಷಿಣ ರೈಲ್ವೆಯು 2024-25ನೇ ಸಾಲಿನ ಕ್ರೀಡಾ ಕೋಟಾದಡಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ವಿವಿಗಳ ಮಟ್ಟದಲ್ಲಿ ಸಾಧನೆ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಕುರಿತು ಇನ್ನಷ್ಟು ಡೀಟೇಲ್ಸ್ ಅನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ದಕ್ಷಿಣ ರೈಲ್ವೆ ಆರ್ಆರ್ಸಿ
ಹುದ್ದೆ ಹೆಸರು : ಕ್ರೀಡಾ ಕೋಟಾದಡಿಯ ಲೆವೆಲ್ 1, 2, 3, 4, 5 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ : 67
ವಿದ್ಯಾರ್ಹತೆಗಳು
- ಕ್ರೀಡಾ ಕೋಟಾದಡಿಯ ಲೆವೆಲ್ 1 ಹುದ್ದೆಗಳಿಗೆ ಎಸ್ಎಸ್ಎಲ್ಸಿ ಜತೆಗೆ ಐಟಿಐ ಪಾಸ್.
- ಕ್ರೀಡಾ ಕೋಟಾದಡಿಯ ಲೆವೆಲ್ 3, ಲೆವೆಲ್ 2 ಹುದ್ದೆಗಳಿಗೆ ಪಿಯುಸಿ ಅಥವಾ ಐಟಿಐ ಪಾಸ್.
- ಕ್ರೀಡಾ ಕೋಟಾದಡಿಯ ಲೆವೆಲ್ 4, ಲೆವೆಲ್ 5 ಹುದ್ದೆಗಳಿಗೆ ಯಾವುದೇ ಪದವಿ ಪಾಸ್ ಮಾಡಿರಬೇಕು.
ಮೇಲಿನ ವಿದ್ಯಾರ್ಹತೆ ಜತೆಗೆ ಈ ಕೆಳಗಿನ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ವಿವಿಗಳ ಮಟ್ಟದಲ್ಲಿ ಚಾಂಪಿಯನ್ಶಿಪ್ ಪಡೆದ ಹಾಗೂ ಕ್ರೀಡೆಗಳಲ್ಲಿ ಪ್ರಸ್ತುತ ಆಕ್ಟಿವ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಕುಸ್ತಿ (ಪುರುಷ) ಫ್ರೀ ಸ್ಟೈಲ್
- ಶೂಟಿಂಗ್
- ಕಬ್ಬಡಿ
- ಹಾಕಿ
- ತೂಕ ಎತ್ತುವಿಕೆ
- ಪವರ್ಲಿಫ್ಟಿಂಗ್ (ಪುರುಷ)
- ಪವರ್ಲಿಫ್ಟಿಂಗ್ (ಮಹಿಳೆ)
- ಜಿಮ್ನಾಸ್ಟಿಕ್ (ಪುರುಷ)
- ಕ್ರಿಕೆಟ್ (ಪುರುಷ)
- ಕ್ರಿಕೆಟ್ (ಮಹಿಳೆ)
- ಬಾಲ್ ಬ್ಯಾಡ್ಮಿಂಟನ್ (ಪುರುಷ)
ವೇತನ ವಿವರ
- ಲೆವೆಲ್ 4 ಹುದ್ದೆಗೆ ವೇತನ ಶ್ರೇಣಿ ರೂ.25,500-81,100.
- ಲೆವೆಲ್ 5 ಹುದ್ದೆಗೆ ವೇತನ ಶ್ರೇಣಿ ರೂ.29,200-92,300.
- ಲೆವೆಲ್ 3 ಹುದ್ದೆಗೆ ವೇತನ ಶ್ರೇಣಿ ರೂ.21,700-69,100.
- ಲೆವೆಲ್ 2 ಹುದ್ದೆಗೆ ವೇತನ ಶ್ರೇಣಿ ರೂ.19,900-63,200.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 07-09-2024
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 06-10-2024 ರ ರಾತ್ರಿ 23-59 ಗಂಟೆವರೆಗೆ.
ಆನ್ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಸೆಪ್ಟೆಂಬರ್ 07 ರಂದು ಬಿಡುಗಡೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಡೀಟೇಲ್ಸ್ ಹಾಗೂ ಅಧಿಸೂಚನೆಗಾಗಿ ಆಸಕ್ತರು ಸದರ್ನ್ ರೈಲ್ವೆಯ ಅಧಿಕೃತ ವೆಬ್ಸೈಟ್ ವಿಳಾಸ https://rrcmas.in/ ಕ್ಕೆ ಭೇಟಿ ನೀಡಬಹುದು.
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.500.
ಇತರೆ ಹಿಂದುಳಿದ ವರ್ಗ ರೂ.500.
ಎಸ್ಸಿ / ಎಸ್ಟಿ / ಆರ್ಥಿಕವಾಗಿ ಹಿಂದುಳಿದ ವರ್ಗ / ಮಾಜಿ ಸೈನಿಕರು, ವಿಕಲಚೇತನ ಅಭ್ಯರ್ಥಿಗಳಿಗೆ ರೂ.250.