ಬೆಂಗಳೂರು: ಜಾತಿ ನಿಂದನೆ ಕೇಸ್ ನಲ್ಲಿ ಜೈಲು ಸೇರಿರೋ ಮುನಿರತ್ನ ಮೇಲೆ ತಡ ರಾತ್ರಿ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ. ಕೇವಲ ಅತ್ಯಾಚಾರ ಪ್ರಕರಣ ಅಷ್ಟೇ ಅಲ್ಲದೇ ನರಮೇಧದ ಪ್ರಕರಣ ಕೂಡ ದಾಖಲಾಗಿದೆ.
ಏಡ್ಸ್ ಪೀಡಿತೆಯನ್ನ ಬಳಸಿಕೊಂಡ ಮುನಿರತ್ನ ತನ್ನ ಎದುರಾಳಿ ಕಾರ್ಪೊರೇಟ್ ನ ಹನಿಟ್ರಾಪ್ ಮಾಡಿಸಿದ್ನಂತೆ. ಮುನಿರತ್ನ ವಿರುದ್ಧ ವಿರುದ್ಧ ದೂರು ನೀಡಿರೋ ಸಂತ್ರಸ್ತೆ ತನ್ನ ದೂರಿನಲ್ಲಿ ಈ ವಿಚಸರವನ್ನ ಹೇಳಿಕೊಂಡಿದ್ದಾರೆ. ಕೊವಿಡ್ ಟೈಮ್ ನಲ್ಲಿ ಮಾಸ್ಕ್ ಹಂಚುವಾಗ ಸಂತ್ರಸ್ತೆ ಪರಿಚಯವಾಗಿದ್ದು, ನಂತರ ನಂಬರ್ ಪಡೆದ ಮುನಿರತ್ನ ಗುಡ್ ಮಾರ್ನಿಂಗ್ ಗುಡ್ ನೈಟ್ ಅಂತ ಮೆಸೇಜ್ ಸ್ಟಾರ್ಟ್ ಮಾಡೊ ಲವ್ ಸಾಂಗ್ ಕಳುಹಿಸಿತ್ನಂದೆ. ಇದಾದ ನಂತರ ಸಂತ್ರಸ್ತೆಯನ್ನ ತನ್ನ ಅಪಾರ್ಟೆಂಟ್ ಗೆ ಕರೆಸೊ ಬಲವಂತವಾಗಿ ಅತ್ಯಾಚಾರ ಮಾಡಿದ್ನಂತೆ. ಇದಕ್ಕೆ ವಿರೋಧ ಮಾಡಿದಾಗ ಜನರನ್ನ ಸೇರಿಸಿ ನಿನ್ನ ಮೇಲೆ ಹೇಳ್ತಿನಿ ಅಂತ ಬೆದರಿಕೆ ಹಾಕಿದ್ನಂತೆ. ಅಷ್ಟೇ ಅಲ್ಲದೆ ಅತ್ಯಾಚಾರ ವಿಡಿಯೋ ರೆಲಾರ್ಡ್ ಮಾಡಿ ನಿನ್ನ ಫೋಷನ್ ಮಾತ್ರ ಎಡಿಟ್ ಮಾಡಿ ವೈರಲ್ ಮಾಡ್ತಿನಿ ಅಂತ ಬೆದರಿಸಿದ್ನಂತೆ.
ಈ ವಿಡಿಯೋ ಇಟ್ಟುಕೊಂಡ ಆರ್ ಆರ್ ನಗರ ಕ್ಷೇತ್ರದ ಕಾರ್ಪೊರೇಟರ್ ಪತಿಯನ್ನ ಹನಿ ಟ್ರಾಪ್ ಮಾಡು ಅಂತ ಬಲವಂತ ಮಾಡಿದ್ನಂತೆ ಇದಕ್ಕೆ ಸಂತ್ರಸ್ತೆ ಒಪ್ಪದಿದ್ದಾಗ ಬೇರೆ ಮಹಿಳೆ ಕಳುಹಿಸುತ್ತೆನೆ ಅವಳನ್ನ ಅವನಿಗೆ ಪರಿಚಯ ಮಾಡಿಸು ಅಂತ ಹೇಳಿದ್ನಂತೆ. ಇದಕ್ಕೆ ಸಂತ್ರಸ್ತೆ ಒಪ್ಪಿ ಮುನಿರತ್ನ ಅಪಾರ್ಟ್ಮೆಂಟ್ ನಲ್ಲೆ ಮುನಿರತ್ನ ಕಳುಹಿಸಿದ್ದ ಮಹಿಳೆಯನ್ನ ಕಾರ್ಪೊರೇಟರ್ ಪತಿ ಜೊತೆಗೆ ಬಿಟ್ಟಿದ್ದಾಗಿ ಹೇಳಿದ್ದಾಳೆ.
ಇನ್ನೂ ಈ ಅಪಾರ್ಟ್ ಮೆಂಟ್ ನಲ್ಲಿ ಮುನಿರತ್ನ ಕ್ಯಾಮರಾ ಫಿಕ್ಸ್ ಮಾಡಿಸಿ ಅದನ್ನ ತನ್ನ ಕಚೇರಿಯಲ್ಲಿ ಕುಳಿತು ಲೈವ್ ನೋಡ್ತಿದ್ನಂತೆ. ಇದೆನ್ನ ರೆಕಾರ್ಡ್ ಮಾಡಿಕೊಂಡು ಸಂತ್ರಸ್ತೆ ಥ್ಯಾಂಕ್ಸ್ ಹೇಳಿ ನೀನು ಕಾರ್ಪೊರೇಟ್ ಪತಿ ಹತ್ರ ಕಳುಹಿಸಿದ ಮಹಿಳೆಗೆ ಏಡ್ಸ್ ಇದೆ ಅಂತ ಹೇಳಿದ್ನಂತೆ. ನೀನು ಇನ್ನೊಂದ ಕೆಲಸ ಮಾಡಬೇಕು ಆ ಕಾರ್ಪೊರೇಟ್ ಮಗನಿಗೂ ಏಡ್ಸ್ ಇರೋ ಮಹಿಳೆ ಸಂಪರ್ಕ ಮಾಡಿಸು ಇಲ್ಲ ಏಡ್ಸ್ ಇಂಜೆಕ್ಷನ್ ನೀಡು ಅಂತ ಹೇಳಿದ್ನಂತೆ. ಸದ್ಯ ಈ ಅಂಶ ಸಾಕಷ್ಟು ದೊಡ್ಡ ಅಪರಾಧವಾಗಿ ಕಾಣ್ತಿದೆ.
ಇನ್ನೂ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ನ ಸೆಕ್ಷನ್ ಗಳು..!
354 A – ಲೈಂಗಿಕ ದೌರ್ಜನ್ಯ
354 C – ಇಚ್ಚೆಗೆ ವಿರುದ್ಧವಾಗಿ ಚಿತ್ರೀಕರಣ
376 N ( 2 ) – ಸರ್ಕಾರಿ ಸೇವಕನಿಂದ ನಿರಂತರ ಅತ್ಯಾಚಾರ
506 – ಜೀವ ಬೆದರಿಕೆ
504 – ಉದ್ದೇಶ ಪೂರ್ವಕ ನಿಂದನೆ
120 B – ಅಪರಾಧಿಕ ಒಳಸಂಚು
149 – ಕಾನೂನು ಬಾಹೀರ ಸಭೆ
384 – ಸುಲಿಗೆ
406 – ನಂಬಿಕೆ ದ್ರೋಹ
308 – ನರಹತ್ಯೆ ಮಾಡುವ ಪ್ರಯತ್ನ
ಐಟಿ ಆ್ಯಕ್ಟ್ – 66 ಅಂಡ್ 66E ಅಡಿ ಎಫ್ ಐ ಆರ್ ದಾಖಲು