ಬಳ್ಳಾರಿ:- ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಿಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ ಹಾಕಿದ್ದ ಸೈಬರ್ ವಂಚಕನನ್ನು ಅರೆಸ್ಟ್ ಮಾಡಲಾಗಿದೆ.
ದೊಡ್ಡಬಳ್ಳಾಪುರ: ಮಳೆಗಾಗಿ ಇಬ್ಬರು ಹುಡುಗರ ಮದುವೆ ಮಾಡಿದ ಗ್ರಾಮಸ್ಥರು!
ನಕಲಿ ಈ ಮೇಲ್ ಬಳಸಿ ಕಲ್ಲಿದ್ದಿಲು ಸರಬರಾಜು ಕಂಪನಿಗೆ 2 ಕೋಟಿ 11 ಲಕ್ಷದ 50 ಸಾವಿರ ರೂ. ವಂಚಿಸಿದ್ದ ಮಧ್ಯಪ್ರದೇಶ ಮೂಲದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಣದ ಸಮೇತ ಅರೆಸ್ಟ್ ಆಗಿದ್ದಾನೆ
ಬಳ್ಳಾರಿಯ ಹಿಂದೂಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ರೂ. ಕೊಡಬೇಕಿತ್ತು. ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಇದರ ಬಗ್ಗೆ ಮಾಹಿತಿ ಪಡೆದಿದ್ದ. ಅಗರ್ವಾಲ್ ಕಂಪನಿಯ ನಕಲಿ ಇ-ಮೇಲ್ ಕ್ರಿಯೇಟ್ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಜ್ ಆಗಿದೆ ಅಂತಾ ಹಿಂದುಸ್ತಾನ್ಗೆ ಕಳಿಸಿದ್ದ. ಹೀಗಾಗಿ ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್ಗೆ ಹಣ ಹಾಕಿದ್ದರು. ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ.
ವಂಚನೆ ಕುರಿತು ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದೂಸ್ತಾನ್ ಕಂಪನಿಯಿಂದ ದೂರು ದಾಖಲಿಸಲಾಗಿತ್ತು. ಕೂಡಲೇ ಬಳ್ಳಾರಿ ಎಸ್ಪಿ ಶೊಭಾರಾಣಿ ಅವರಿಂದ ಪ್ರಕರಣ ಭೇದಿಸಲು ಸೈಬರ್ ಕ್ರೈಮ್ ಡಿಎಸ್ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿದ್ರು. ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣ ಫ್ರೀಜ್ ಮಾಡಿಸಿದ್ದಾರೆ.