ಬೆಂಗಳೂರು:- ಲೋಕಾಯುಕ್ತದಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಕೇಸ್ ಗಳಿ ವಿಚಾರಣೆಗೆ ಬಾಕಿ ಉಳಿದಿವೆ.
ಕಳೆದ ಜುಲೈ ತಿಂಗಳ ಅಂತ್ಯದ ವರೆಗೆ 18 ಸಾವಿರ ಕೇಸ್ಗಳು ಲೋಕಾಯುಕ್ತದದಲ್ಲಿ ಬಾಕಿಯಿವೆ ಎಂದು ಕೇಸ್ ಡಿಟೇಲ್ಸ್ನಲ್ಲಿ ತಿಳಿದುಬಂದಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯೇ ಕೊಟ್ಟಿರುವ ಕೇಸ್ ಡಿಟೇಲ್ಸ್ ಪ್ರತಿ ಲಭ್ಯವಾಗಿದೆ.
ಎಸಿಬಿ ರದ್ದಾದ ಬಳಿಕ ಎಲ್ಲಾ ಕೇಸ್ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ ಎಸಿಬಿ + ಲೋಕಾಯುಕ್ತದಲ್ಲಿ ದಾಖಲಾದ ಕೇಸ್ಗಳ ಪೈಕಿ ಸುಮಾರು 18 ಸಾವಿರ ಕೇಸ್ಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ದೂರು ದಾಖಲಾಗಿದ್ದರೂ ಕೆಲವು ಕಾರಣಗಳಿಂದ ವಿಚಾರಣೆ ಬಾಕಿ ಉಳಿದಿದೆ ಅಂತ ಲೋಕಾಯುಕ್ತ ಅಧಿಕಾರಿ ಮೂಲಗಳು ತಿಳಿಸಿವೆ,
ಮಾನ್ಯ ಲೋಕಾಯುಕ್ತರು- 5495 ಕೇಸ್ ಬಾಕಿ.
ಉಪ ಲೋಕಾಯುಕ್ತ 1- 7028 ಕೇಸ್ ಬಾಕಿ.
ಉಪ ಲೋಕಾಯುಕ್ತ 2- 6363 ಕೇಸ್ ಬಾಕಿ.
ಒಟ್ಟು – 18,886 ಕೇಸ್ ಬಾಕಿ