ಬೆಂಗಳೂರು : ಒಂದು ದೇಶ. ಒಂದೇ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರದ ಎನ್.ಡಿ. ಎ ಸರಕಾರ ಕೈಗೊಂಡಿರುವ ತೀರ್ಮಾನವನ್ನು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಸ್ವಾಗತಿಸಿದ್ದಾರೆ.
ಕವಿತಾ ಗೌಡ- ಚಂದನ್ ಮನೆಯಲ್ಲಿ ಸಂಭ್ರಮ: ಗಂಡು ಮಗುವಿನ ಪೋಷಕರಾದ ಕಿರುತೆರೆ ಜೋಡಿ
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಿಎ ಶರವಣ, ಒಂದು ದೇಶ. ಒಂದೇ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರದ ಎನ್.ಡಿ. ಎ ಸರಕಾರ ಕೈಗೊಂಡಿರುವ ತೀರ್ಮಾನ ಭಾರತ ಪ್ರಜಾಸತ್ತೆಯ ಚಾರಿತ್ರಿಕ ಸುಧಾರಣೆ ಎಂದು ಬಣ್ಣಿಸಿದ್ದಾರೆ.
ಭಾರತದ ಚುನಾವಣೆ ವ್ಯವಸ್ಥೆಯನ್ನು ಅತ್ಯಂತ ಕ್ರಮ ಬದ್ದ ಮತ್ತು ಸರಳಗೊಳಿಸುವ ಈ ಪ್ರಯತ್ನ ಅಭೂತಪೂರ್ವ ಆಗಿದ್ದು, ಅದನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತೇನೆ ಎಂದು ಅವರು ಶ್ಲಾಘಿಸಿದ್ದಾರೆ.
ಈ ಐತಿಹಾಸಿಕ ಕ್ರಮದಿಂದಾಗಿ ಭಾರತದಲ್ಲಿ ಪ್ರಜಾಸತ್ತೆ ಇನ್ನಷ್ಟು ಬಲಗೊಂಡು, ಬೊಕ್ಕಸದ ಮೇಲಿನ ಭಾರ ಭಾರಿ ಪ್ರಮಾಣದಲ್ಲಿ ತಗ್ಗುತ್ತದೆ. ಪಾರದರ್ಶಕ ವ್ಯವಸ್ಥೆ ಜಾರಿಗೆ ಬರುತ್ತದೆ. ಚುನಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದು ನಿಶ್ಚಿತ ಎಂದು ಶರವಣ ಅವರು ಹೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಪಕ್ಷಗಳಲ್ಲಿ ಪರಸ್ಪರ ಸಹಕಾರ ಮತ್ತು ಸಾಮ್ಯತೆಯ ವಾತಾವರಣ ಮೂಡಿಸುವಲ್ಲಿ ಈ ವ್ಯವಸ್ಥೆ ಸಹಕಾರಿ ಆಗುತ್ತದೆ ಎಂದು ಶರವಣ ಅವರು ಅಭಿಪ್ರಾಯ ಪಟ್ಟಿದ್ದಾರೆ.