ಡಿಗ್ರಿ ಕಂಪ್ಲೀಟ್ ಮಾಡಿ ಮನೇಲೇ ಕೂತಿದ್ದೀರಾ!? ಎಷ್ಟೇ ಜಾಬ್ ಹುಡುಕಿದರೂ ಸಿಗ್ತಿಲ್ವಾ!? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ. ಇಲ್ಲಿ ನೀವೇನಾದರೂ ಆಯ್ಕೆ ಆದ್ರೆ ಕೈ ತುಂಬಾ ಸಂಬಳ ಗ್ಯಾರಂಟಿ.
Beauty Tips: ಎಷ್ಟೇ ವಯಸ್ಸಾದ್ರೂ ಯಂಗ್ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ಎಸ್, ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ವುಮೆನ್ ರಿಸೋರ್ಸ್ ವಿಭಾಗ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಿದೆ.
ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ, ಅರ್ಹರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು.
ಕರ್ನಾಟಕದಲ್ಲಿ ಒಟ್ಟು 600 ಉದ್ಯೋಗಗಳಿದ್ದು ಅದರಲ್ಲಿ ಬೆಂಗಳೂರು ಅರ್ಬನ್ನಲ್ಲಿ 92 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆ ಹೆಸರು- ಕೆನರಾ ಬ್ಯಾಂಕ್
ಪೋಸ್ಟ್ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು- 3,000
ವೆಬ್ಸೈಟ್- @canarabank.com
ವಯೋಮಿತಿ ಸಡಿಲಿಕೆ:
ಎಸ್ಎಸಿ, ಎಸ್ಟಿಗೆ 5 ವರ್ಷಗಳು ಸಡಿಲಿಕೆ
ಒಬಿಸಿ, ಜನರಲ್ 3 ವರ್ಷಗಳು ಇರುತ್ತದೆ
ವಿಶೇಷ ಚೇತನಿಗೆ 10 ವರ್ಷಗಳು ಸಡಿಲಿಕೆ
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
ಸೆಕೆಂಡ್ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ
ಟೆಸ್ಟ್ ನಡೆಸಲಾಗುತ್ತದೆ
ದಾಖಲೆ ಪರಿಶೀಲನೆ
ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.