ಬೆಂಗಳೂರು:- ಬಿಜೆಪಿ ಯತ್ನಾಳ್ರನ್ನ ಪಕ್ಷದಲ್ಲಿ ಇಟ್ಟುಕೊಂಡಿರೋದೆ ಬೊಗಳಿಸೋಕೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಮೇಲೆ ಆರೋಪಗಳನ್ನು ಮಾಡಲು ಯತ್ನಾಳ್ ಅವರನ್ನ ಬಿಜೆಪಿ ಇಟ್ಟುಕೊಂಡಿದೆ. ಹಿಂದೆ ಬಿಜೆಪಿ ನಾಯಕರ ವಿರುದ್ಧವೇ ಯತ್ನಾಳ್ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧನೂ ಯತ್ನಾಳ್ ಆರೋಪ ಮಾಡಿದ್ದರು. ಆದರೆ ಬಿಜೆಪಿ ಏನು ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಬಗ್ಗೆ ಪ್ರಸ್ತಾಪ ಮಾಡಿದ ಸಿಎಂ, ಸಂವಿಧಾನ ಬದಲಾವಣೆ ಮಾಡೋಕೆ ನಾವು ಬಂದಿದ್ದೇವೆ ಅಂತ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದ್ದರು. ಆದರೂ ಯಾವುದೇ ಕ್ರಮ ಬಿಜೆಪಿ ತೆಗೆದುಕೊಂಡಿಲ್ಲ ಎಂದು ಹರಿಹಾಯ್ದರು.