ಬೆಂಗಳೂರು:- ಮುನಿರತ್ನ ವಿಷಯದಲ್ಲಿ ದ್ವೇಷದ ರಾಜಕೀಯ ಮಾಡಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
Hubballi: ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗೆ ಯಕೃತ್ ಕಸಿ!
ಈ ಸಂಬಂಧ ಮಾತನಾಡಿದ ಅವರು,ಶಾಸಕ ಮುನಿರತ್ನ ಕೇಸ್ನಲ್ಲಿ ಯಾವುದೇ ದ್ವೇಷದ ರಾಜಕೀಯ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ಕ್ರಮ ಆಗಿದೆ.
ಶಾಸಕ ಮುನಿರತ್ನ ಕೇಸ್ಗೆ ವಿಶೇಷ ತಂಡ ರಚನೆ ಮಾಡುವಂತೆ ಕಾಂಗ್ರೆಸ್ ಒಕ್ಕಲಿಗ ಶಾಸಕರಿಂದ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಕ್ಕಲಿಗ ಶಾಸಕರು ನನ್ನನ್ನು ಭೇಟಿ ಆಗಿದ್ದರು. ಮುನಿರತ್ನ ಒಕ್ಕಲಿಗರು, ಎಸ್ಸಿಗಳ ಮೇಲೆ ಮಾತಾಡಿದ್ದಾರೆ. ಕೆಟ್ಟ ಪದ ಬಳಕೆ ಮಾಡಿದ್ದಾರೆ. ಹೆಣ್ಣುಮಕ್ಕಳ ಮೇಲೆ ಮಾತಾಡಿದ್ದಾರೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಎಫ್ಎಸ್ಎಲ್ಗೆ ಧ್ವನಿ ರವಾನೆ ಮಾಡಲಾಗಿದೆ. ವರದಿ ಬಂದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮುನಿರತ್ನ ಚೆಲುವರಾಜ್ ಮೇಲೆ ಕೂಡ ಮಾತನಾಡಿದ್ದಾರೆ. ಮಾಜಿ ಪಾಲಿಕೆ ಸದಸ್ಯ ವೇಲು ನಾಯಕ್ ಮೇಲೂ ಮಾತಾಡಿದ್ದಾರೆ. ಅದರ ಮೇಲೆ ದೂರು ಕೊಟ್ಟಿದ್ದಾರೆ. ದೂರಿನ ಆಧಾರದಲ್ಲಿ ದೂರು ದಾಖಲು ಆಗಿದೆ. ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾನೂನು ರೀತಿ ಕ್ರಮ ಆಗಿದೆ. ಯಾವುದೇ ದ್ವೇಷದ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.