ಹುಬ್ಬಳ್ಳಿ: ನಾವು ಪ್ರಕೃತಿಯ ಹಾನಿಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಬೇಕಾದರೆ ಪರಿಸರವನ್ನು ರಕ್ಷಿಸಬೇಕಾಗುತ್ತದೆ ವಾಯು ಅಗ್ನಿ ನೀರು ಭೂಮಿ ಆಕಾಶ ಇವು ದೈವದತ್ತ ಕೊಡುಗೆಯಾಗಿದ್ದು ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಇವುಗಳ ವಿನಾಶವಾದರೆ ಈ ಪ್ರಕೃತಿಯಲ್ಲಿ ಯಾವ ಜೀವಿಗೂ ಬದುಕಲು ಅವಕಾಶವಿಲ್ಲ ಇಂದು ನಾವು ಮಕ್ಕಳನ್ನು ಹುಟ್ಟಿಸಿದಂತೆ ಮರಗಳನ್ನು ಹುಟ್ಟಿಸಬೇಕಾದದ್ದು ನಮ್ಮ ಮೂಲ ಛಲವಾಗಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜೊತೆಗೆ, ಪರಿಸರದ ಕಾಳಜಿ ಇದು ನನ್ನ ಒಂದು ವಿಷಯ ಎಂದು ಆಯ್ಕೆ ಮಾಡಿಕೊಳ್ಳಬೇಕು ಇಂದಿನ ಮಗು ನಾಳೆನ ನಾಗರಿಕವೆಂಬಂತೆ ಇಂದಿನ ಸಸಿ ನಾಳೆ ಹೆಮ್ಮರವಾಗಿ ಆಮ್ಲಜನಕ ನೆರಳು ಔಷಧಿಯ ಸಾಮಗ್ರಿಗಳನ್ನು ಮರವು ನೀಡಬಲ್ಲದು ಎಂದು ಪರಿಸರ ಪ್ರೇಮಿ ಗ್ರೀನ್ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಎಪಿಎಂಸಿ ಸದಸ್ಯ ಶ್ರೀ ಚನ್ನು ಹೊಸಮನಿ ಹೇಳಿದರು.
ಜೇಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಸಹೇಲಿ 17 ಸಪ್ಟೆಂಬರ್ ದಿಂದ 23 ರ ವರೆಗೆ ನಡೆಯುವ ಸಪ್ತಾಹದ ಮೊದಲ ದಿನವಾದ ಇಂದು ಭೈರಿದೇವರಕೊಪ್ಪದ ಜಾನಪದ ತಜ್ಞ ಡಾ ರಾಮು ಮೂಲಗಿ ಅವರ ಜಾನಪದ ಜಗುಲಿಯಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು,
ಸಹೇಲಿ ಅಧ್ಯಕ್ಷೆ ಶ್ರೀಮತಿ ಭಾರತಿ ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜೇಂಟ್ಸ್ ಮತ್ತು ಸಹೇಲಿ ಬಳಗವು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸರ್ವ ವಿಧವಾದ ಸಹಾಯ ಮಾಡುತ್ತಾ ಬಂದಿದ್ದು, ಸಮಾಜ ಸೇವೆಯೇ ಮೂಲ ಗುರಿಯಾಗಿದೆ ಎಂದು ಹೇಳಿದರು ಶ್ರೀಮತಿ ಭಾರತಿ ವಾಲಿಯವರು ಬಾಳನಗೌಡರ ಉಚಿತ ವಿದ್ಯಾರ್ಥಿ ನಿಲಯದ 50 ಮಕ್ಕಳಿಗೆ ಸ್ವೀಟರ್ ಮತ್ತು ಆಹಾರ ಪಡಿತರವನ್ನು ವಿತರಣೆ ಮಾಡಿದರು ಸಂಕಷ್ಟದಲ್ಲಿರುವ ವಿದ್ಯಾರ್ಥಿ ವೃಂದವನ್ನು ಅಭಿವೃದ್ಧಿಯತ್ತ ಮೇಲೆತ್ತುವ ಕೆಲಸ ಮಾಡುತಿದ್ದೇವೆ ಎಂದು ಹೇಳಿದರು ಮತ್ತೊಬ್ಬ ಮುಖ್ಯ ಅತಿಥಿ ಉತ್ತರ ಕರ್ನಾಟಕ ಪ್ರಗತಿಪರರಂಗದ ಅಧ್ಯಕ್ಷ ಗಂಗಾಧರ ದೊಡ್ಡವಾಡ ಮಾತನಾಡಿ ಮಕ್ಕಳು ರಾಷ್ಟ್ರ ಖ್ಯಾತಿಯ ಮಟ್ಟಕ್ಕೆ ವಿದ್ಯಾಭ್ಯಾಸ ಗೈದು ದೇಶದ ಮತ್ತು ತಾಯ್ನಾಡಿನ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು ಮುಖ್ಯ ಅತಿಥಿಗಳಾದ ಜೆಂಟ್ಸ್ ಗ್ರೂಫ್ ನ ಗಜಾನನ ನೀಲಾಕರಿ, ಗ್ರಂಥಪಾಲಕ ಸುರೇಶ ಹೊರಕೇರಿ ಮಾತನಾಡಿದರು ಜಾನಪದ ತಜ್ಞ ಡಾ. ರಾಮು ಮೂಲಗಿ ಸ್ವಾಗತಿಸಿದರು ಕಾರ್ಯದರ್ಶಿ ಸ್ನೇಹಾ ಜಾಧವ ಶಶಿಕಲಾ ನಾಯ್ಡು ರೇಣುಕಾ ದೇಸಾಯಿ ರೇಖಾ ಚಿನಿವಾಲ ಉಷಾ ಹಿರೇಮಠ ವಿಜಯಲಕ್ಷ್ಮಿ ರಾಯನಗೌಡರ ಮುಂತಾದವರು ಉಪಸ್ಥಿತರಿದ್ದರು.