ಬೆಂಗಳೂರು:- ಅತ್ಯಂತ ನೀಚವಾಗಿ ಜಾತಿ ನಿಂದನೆ ಮಾಡಿ ಅಶ್ಲೀಲ ಶಬ್ದಗಳಿಂದ ಬೈದು ಲಂಚಕ್ಕೆ ಬೇಡಿಯಿಟ್ಟು ಜೀವ ಬೆದರಿಕೆ ಹಾಕಿರೋ ಆರೋಪದಲ್ಲಿ ಮಾಜಿ ಮಂತ್ರಿ ಬಿಜೆಪಿ ಶಾಸಕ ಮುನಿರತ್ನ ಜೈಲುಪಾಲಾಗಿದ್ದಾರೆ..ಮುನಿರತ್ನ ಜಾಮೀನು ಅರ್ಜಿ ಸಂಬಂಧ ಇಂದು ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆ ಮಾಡಲಾಯಿತು. ಮುನಿರತ್ನ ಮಾಡಿರುವ ಜಾತಿ ನಿಂದನೆ ಕೇಸ್ ವಿಚಾರದ ಕಂಪ್ಲೀಟ್ ಅಪ್ಡೇಟ್ ತೋರಿಸ್ತೀವಿ ನೋಡಿ…
ಆಸ್ಪತ್ರೆಗೆ ವಿಸಿಟ್ ಕೊಟ್ಟಾಕ್ಷಣ ಡಾಕ್ಟರ್ ನಾಲಿಗೆ ನೋಡುವುದ್ಯಾಕೆ ಗೊತ್ತಾ!?
ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜೀವಬೆದರಿಕೆ ಹಾಗು ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ಮುನಿರತ್ನ ಪರಪ್ಪನಅಗ್ರಹಾರ ಸೇರಿದ್ದಾರೆ… .ಹಿರಿಯ ವಕೀಲ ಅಶೋಕ್ ಹಾರನಳ್ಳಿ ನೆನ್ನೆಯೇ ಜಾಮೀನಿಗಾಗಿ ಮುನಿರತ್ನ ಪರ ಅರ್ಜಿ ಸಲ್ಲಿಸಿದ್ರು. ಇಂದು ಬೆಳ್ಳಿಗ್ಗೆ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರು ವಾದ ಪ್ರತಿವಾದಕ್ಕೆ ಅವಕಾಶಮಾಡಿಕೊಟ್ಟರು… ಮೊದಲಿಗೆ ಮುನಿರತ್ನ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ಅಶೋಕ್ ಹಾರನಳ್ಳಿ ಈ ಘಟನೆ ನಡೆದಿರುವುದು ವಾಡ್೯ ನಂಬರ್ 42 ರಲ್ಲಿ. ಅಲ್ಲಿ ಕಸದ ಗುತ್ತಿಗೆ ದಾರ ಚಲುವರಾಜು ಮುಂದೆ ನಡೆದ ಘಟನೆ.ಘಟನೆ ನೆಡೆದಿರೋದು ಮೇ 18 ರಂದು. ಆದರೆ ದೂರು ಕೊಟ್ಟಿರೋದು ಸೆಪ್ಟೆಂಬರ್ 13 ರಂದು.ಸದ್ಯ ಪ್ರಕರಣ ದಾಖಲಾಗಿರೋದು ಅಟ್ರಾಸಿಟಿ.ಅಟ್ರಾಸಿಟಿ ಕೇಸ್ ದಾಖಲಾಗ್ತಿದ್ದಂತೆ ಮರುದಿನ ಆರೋಪಿತನನ್ನ ಬಂಧಿಸಲಾಗಿದೆ. ಅಟ್ರಾಸಿಟಿ ಕೇಸ್ ಸಂಬಂಧ ಆರೋಪಿತ ವ್ಯಕ್ತಿಯನ್ನ ಯಾವಾಗ ಬಂಧನ ಮಾಡಬೇಕು. ಅದಕ್ಕು ಮೊದಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನೀಡಿರುವ ತೀರ್ಪು ಉಲ್ಲೇಖಿಸಿ ವಾದ ಮಂಡಿಸುವುದರ ಜೊತೆ. ಇದು ಇಡೀ ಪ್ರಕರಣ ನೋಡಿದಾಗ ಇದೆಲ್ಲವೂ ರಾಜಕೀಯ ಪ್ರೇರಿತವಾದಂತಹ ಹಾಗೂ ರಾಜಕೀಯ ಪ್ರೇರಿತವಾದ ದೂರುಗಳು ಇದಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಡ ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ RR ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮವರು ಸೋಲಾಗಿದ್ದಾರೆ.ಅದೇ ರೀತಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ದಲ್ಲಿ ಕೂಡಾ ನಮಗೆ ಸೋಲಾಗಿದೆ ಎಂದು ಕೆಲವು ರಾಜಕಾರಣಿಳು ಶಾಸಕ ಮುನಿರತ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇದರಿಂದ ಸೋಲಿನ ನೋವು ತಡೆದು ಕೊಳ್ಳಲಾಗದೆ.ನಮ್ಮ ಕಕ್ಷಿದಾರ ಮುನಿರತ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ.ಇದ್ರಿಂದ ಈ ದೂರಿನಲ್ಲಿ ಯಾವುದೇ ನೈಜತೆ ಇಲ್ಲ.ಇದೆಲ್ಲವೂ ರಾಜಕೀಯ ಪ್ರೇರಿತವಾಗಿದೆ. ಅಂತ ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್ ಪ್ರಕರಣವನ್ನ ಉಲ್ಲೇಖಿಸಿ ನಮ್ಮ ಕಕ್ಷಿದಾರ ಮುನಿರತ್ನಗೆ ಜಮೀನು ನೀಡಬೇಕಾಗಿದೆ ಅಂತ ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿದ್ರು.
ನಂತರ ದೂರುದಾರರ ಪರ ಹಾಜರಿದ್ದ ಎಸ್ ಪಿ.ಪಿ ಪ್ರದೀಪ್ ಪ್ರತಿವಾದ ಆರಂಭಿಸಿದ್ರು. ಕಳೆದ ಒಂಬತ್ತುವರೆ ವರ್ಷಗಳಿಂದ ದೂರುದಾರರನ್ನ ಆತನ ಸ್ನೇಹಿತರ ಮುಂದೆಯೇ ಜಾತಿಯನ್ನ ಉಲ್ಲೆಖಿಸಿ ಶಾಸಕ ಮುನಿರತ್ನ ನಿಂದಿಸಿದ್ದಾರೆ. ಅದು ಕೂಡಾ ಯಾವುದೇ ರಹಸ್ಯ ಸ್ಥಳದಲ್ಲಿ ನಿಂದಿಸಿದ್ದಲ್ಲ. ಸಾರ್ವಜನಿಕರು ಬರುವ ತಮ್ಮ ಕಚೇರಿಯಲ್ಲಿ ಆತನ ಸ್ನೇಹಿತರು, ಮುನಿರತ್ನರ ಸಿಬ್ಬಂದಿಯ ಮುಂದೆ ನಿಂದಿಸಿದ್ದಾರೆ. ಒಬ್ಬ ವ್ಯಕ್ತಿಗಿಂತ ಅಧಿಕ ಮಂದಿ ಅಂದ್ರೆ ಮೂರು ಜನರ ಮುಂದೆ ನಿಂದಿಸಿದ್ರು ಅದು ಉದ್ದೇಶ ಪೂರ್ವಕವಾದ ನಿಂದನೆ. ಸಮಾಜದಲ್ಲಿ ಇರುವ ಯಾವುದೇ ಜಾತಿಯನ್ನ ಬಾಯಿಂದ ಕೇವಲವಾಗಿ ಕರೆಯುವುದಾಗಲಿ. ಹೀಯಾಳಿಸುವುದಾಗಲಿ. ಬರೆಯುವುದಾಗಲಿ. ಕೈ ಯಿಂದ ಸನ್ನೆ ಮಾಡುವುದಾಗಲಿ ಯಾವುದನ್ನೂ ಮಾಡುವಂತಿಲ್ಲ. ಆದ್ರೆ ನಮ್ಮ ದೂರುದಾರ ಚಲುವರಾಜುವಿನ ಜಾತಿ ಯಾವುದು ಅಂತ ನೇರವಾಗಿ ಎಲ್ಲರ ಮುಂದೆ ಕೇಳಿ ಶಾಸಕ ಮುನಿರತ್ನ ಚಲುವರಾಜು ರನ್ನೂ ನಿಂದಿಸಿದ್ದಾರೆ.ಅದೆಲ್ಲದಕ್ಕೂ ಸಾಕ್ಷಿ ಇದೆ. ಅದು ಒಂದು ಎರಡು ಬಾರಿ ಅಲ್ಲ. ಸರಿ ಸುಮಾರು ಸಲ ಹಿಯಾಳಿಸಿದ್ದಾರೆ ಅದರ ಜೊತೆ ಬೆದರಿಕೆಯಾಕಿದ್ದಾರೆ.ಚಲುವರಾಜು ರವರ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಬಳಸಬಾರದ ಶಬ್ದಗಳನ್ನೆಲ್ಲ ಬಳಸಿದ್ದಾರೆ.ಇದರ ಬಗ್ಗೆ ಪಾರದರ್ಶಕವಾದ ತನಿಖೆ ಅವಶ್ಯಕತೆ ಇದೆ.ಇದರಿಂದ ಆರೋಪಿ ಸ್ಥಾನದಲ್ಲಿರುವ ಶಾಸಕ ಮುನಿರತ್ನ ಗೆ ಜಾಮೀನು ಮಂಜೂರು ಮಾಡಬಾರದು. ಎಂದು ಎಸ್ಪಿಪಿ ಪ್ರದೀಪ್ ವಾದಿಸಿದ್ರು. ಅದರ ಜೊತೆ ದೂರುದಾರರ ಪರ ವಕೀಲ ಸೂರ್ಯ ಮುಕುಂದ ರಾಜು ಕೂಡಾ ವಾದ ಮಂಡಿಸಿದ್ದು. ಶಾಸಕರಾದಂತವರಿಗೆ ತಮ್ಮದೇ ಆದಂತಹ ಜವಾಬ್ದಾರಿ ಇರುತ್ತೆ.ಆದ್ರೆ ಇಲ್ಲಿ ಜಾತಿ ಬಗ್ಗೆ ಹೀಯಾಳಿಸಿರೋದು ಅಗೌರವ ತಂದಿರೋದು ಸಾಮಾನ್ಯ ವ್ಯಕ್ತಿಯಲ್ಲ.ಅದು ಕೂಡಾ ಒಬ್ಬ ಪ್ರಭಾವಿ ಶಾಸಕರು ಮಾಜಿ ಸಚಿವರಾಗಿದ್ದಂತವರು ತಮ್ಮ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಮುಂದೆ ನಿಂಧಿಸಿದ್ದಾರೆ. ದೂರು ದಾರನಿಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ ಶಾಸಕರು ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿರು ಅಫಿಡವಿಟ್ ನಲ್ಲೇ ಹೇಳಿರುವಂತೆ ಅವರ ಮೇಲೆ 8 ಕ್ರಿಮಿನಲ್ ಕೇಸ್ ಗಳಿವೆ. ಇಷ್ಟೊಂದು ಕ್ರಿಮಿನಲ್ ಆರೋಪಗಳಿರುವ ಪ್ರಭಾವಿ ಶಾಸಕರಿಗೆ ಜಾಮೀನು ಮಂಜೂರು ಮಾಡಿದ್ರೆ.ಸಾಕ್ಷಿಗಳಿಗೆ ದಮ್ಕಿಯಾಕುವ ಹಾಗೂ ಸಾಕ್ಷಿಗಳನ್ನ ನಾಶಪಡಿಸುವ ಪ್ರಯತ್ನ ನಡೆಯುತ್ತೆ. ತನಿಖೆಗೂ ಅಡ್ಡಿಯಾಗುತ್ತೆ ಇದ್ರಿಂದ ಜಾಮೀನು ಮಂಜೂರು ಮಾಡಬಾರದು ಎಂದು ದೂರುದಾರ ಚಲುವರಾಜು ಪರ ವಕೀಲ ಸೂರ್ಯ ಮುಕುಂದರಾಜ್ ಪ್ರತಿ ವಾದ ಮಂಡಿಸಿದ್ರು.
ಸುದೀರ್ಘ ವಾದ ಪ್ರತಿವಾದವನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ್ ಭಟ್ ಜಾಮೀನು ಅರ್ಜಿ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ರು.. ಇನ್ನು ಶಾಸಕ ಮುನಿರತ್ನ ಗೆ ನಾಳೆ ಬೇಲಾ ಇಲ್ಲ ಜೈಲಾ ಅನ್ನೋದು ಗೊತ್ತಾಗಲಿದೆ..