ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಇಲ್ಲಿನ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೇ ಬೇಡಿಕೆ ಇಡುತ್ತಿರುವ ದರ್ಶನ್ ಇದೀಗ ಚೇರ್ಗೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲಧಿಕಾರಿಗಳು ತಣ್ಣೀರು ಎರಚಿದ್ದಾರೆ.
ಸರ್ಜಿಕಲ್ ಕಮೋಡ್, ವಿಟಮಿನ್ ಟ್ಯಾಬ್ಲೇಟ್ ಹಾಗೂ ಟಿವಿ ಬಳಿಕ ಇದೀಗ ಕುಳಿತುಕೊಳ್ಳೋಕೆ ಚೇರ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ದರ್ಶನ್ಗೆ ಜೈಲಧಿಕಾರಿಗಳು ನಿಜ ಜೈಲು ಹೇಗಿರುತ್ತದೆ ಎಂಬ ರುಚಿಯನ್ನು ತೋರಿಸುತ್ತಿದ್ದಾರೆ. ಆರೋಪಿ ದರ್ಶನ್ ಎಂತಹ ದೊಡ್ಡ ಸ್ಟಾರ್ ಆಗಿದ್ದರೂ ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ಅವರನ್ನು ಸ್ಟ್ರಿಕ್ಟ್ ಆಗಿ ನಡೆಸಿಕೊಳ್ಳುತ್ತಿದ್ದಾರೆ.
Supreme Court: ನೈಟ್ ಶಿಫ್ಟ್ ಮಾಡುವ ಮಹಿಳಾ ವೈದ್ಯರಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ: ಸುಪ್ರೀಂ ಕೋರ್ಟ್
ಆದ ಕಾರಣ ದರ್ಶನ್ ಜೈಲಿನ ಮ್ಯಾನುವಲ್ ಪ್ರಕಾರವೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಯಾವುದೂ ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ಒಂದೊಂದೇ ಬೇಡಿಕೆಯನ್ನ ಜೈಲಧಿಕಾರಿಗಳ ಮುಂದೆ ಇಡುತ್ತಿದ್ದಾರೆ. ಜೈಲಧಿಕಾರಿಗಳು ಟಿವಿ ನೀಡಿದ ಬಳಿಕ ವಿಟಮಿನ್ ಟ್ಯಾಬ್ಲೇಟ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆರೋಪಿ ದರ್ಶನ್ ಚೇರ್ ಬೇಡಿಕೆ ಇಟ್ಟ ಬಳಿಕ ಜೈಲಧಿಕಾರಿಗಳು ಚೇರ್ ಕೊಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.