ಬೆಂಗಳೂರು: ಬಹುಭಾಷಾ ನಟಿ ಶಕುಂತಲಾ ಅವರು ಹೃದಯಾಘಾತದಿಂದ ಸೆ.17ರಂದು ನಿಧನರಾಗಿದ್ದಾರೆ. ಸಿಐಡಿ ಶಕುಂತಲಾ ಎಂದೇ ಫೇಮಸ್ ಆಗಿದ್ದ ನಟಿ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಮಗಳ ಮನೆಯಲ್ಲಿ ವಾಸಿಸುತ್ತಿದ್ದ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ (ಸೆ.17) ನಟಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಮನೆಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೆ.17ರ ಸಂಜೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಶಕುಂತಲಾಗೆ 84 ವರ್ಷ ವಯಸ್ಸಾಗಿತ್ತು.
ಅಂದಹಾಗೆ, ನೃತ್ಯಗಾರ್ತಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಶಕುಂತಲಾ, ನಂತರ ನಾಯಕಿಯ ಪಟ್ಟಕ್ಕೆ ಏರಿದ್ರು. ಶಿವಾಜಿ ಗಣೇಶನ್, ಎಂಜಿಆರ್, ಜೈಶಂಕರ್ ಮುಂತಾದ ನಾಯಕ ನಟರೊಂದಿಗೆ ನಟಿಸಿದ್ದಾರೆ. ಅಶಿಕ್ಷಿತ ಪ್ರತಿಭೆ, ಕೊಟ್ಟ ದೇವತೆ,ಪಶ್ಚಾತ್ತಾಪ, ವಸಂತ ಅರಮನೆ, ನ್ಯಾಯ, ಭಾರತ ವಿಲಾಸ, ರಾಜರಾಜ ಚೋಳನ್, ಪೊನ್ನುಂಚಲ್ ಸೇರಿದಂತೆ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಕುಂತಲಾ ನಟಿಸಿದ್ದಾರೆ.