ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಇಂದಿಗೆ ಬರೋಬ್ಬರಿ 100 ದಿನ ತುಂಬಿದೆ. ಇನ್ನೂ ಜೈಲಿನಲ್ಲಿ ಪದೇ ಪದೇ ದುರ್ನಡತೆ ತೋರುತ್ತಿದ್ದ ದಾಸನಿಗೆ ಪತ್ರ ಬರೆಯುವ ಮೂಲಕ ವಕೀಲರು ಪಾಠ ಕಲಿಸಿದ್ದು, ಇದೀಗ ದರ್ಶನ್ ಎಚ್ಚೆತ್ತುಕೊಂಡಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.
40 ವರ್ಷದ ನಂತರ ಮೊಟ್ಟೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಇಲ್ಲಿದೆ ಮಾಹಿತಿ
ವಕೀಲರು ದರ್ಶನ್ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.
ಇದೇ ಕಾರಣಕ್ಕೆ ನಿನ್ನೆ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್ನಿಂದ ಹೊರ ಬಂದಿದ್ದರು. ಪತ್ನಿ ಹಾಗೂ ಆಪ್ತರ ಭೇಟಿ ಬಳಿಕವೂ ನಗುತ್ತಲೇ ಸೆಲ್ಗೆ ಹೋಗಿದ್ದರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ.