ಬೆಂಗಳೂರು: ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದ ಸರ್ಕಾರ ಈಗ ಮತ್ತೊಮ್ಮೆ ಶಾಕ್ ಕೊಡಲು ಮುಂದಾಗಿದೆ. ಅಕ್ಟೋಬರ್ ಮೊದಲ ವಾರದಿಂದಲೇ ಮತ್ತೆ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಮದ್ಯ ದರ ಏರಿಕೆ (Liquor Price Increase) ಮಾಡಿ ಸರ್ಕಾರ ಶಾಕ್ ನೀಡಿತ್ತು. ಇದೀಗ ಮತ್ತೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಹೌದು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯನವರು (CM Siddaramaiah) ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು.
ಯಾವ್ಯಾವ ಬಿಯರ್ ಬೆಲೆ ಎಷ್ಟಾಗಬಹುದು…?
ಬಿಯರ್ ಈಗಿನದರ ಪರಿಷ್ಕೃತ ದರ ಸಾಧ್ಯತೆ
ಬೂಮ್ ಸ್ಟ್ರಾಂಗ್ 163 172/175
ಬಡ್ವೈಸರ್ ಮ್ಯಾಗ್ನಮ್ 213/230
ಬಡ್ವೈಸರ್ ಪ್ರಿಮಿಯಂ 200 215
ಕೆಎಫ್ ಪ್ರಿಮಿಯಂ 168 180
ಕೆಎಫ್ ಸ್ಟ್ರೋಮ್ 177 187
ಕೆಎಫ್ ಸ್ಟ್ರಾಂಗ್ 168 180
ಕೆಎಫ್ ಅಲ್ಟ್ರಾ 199 220
ಟ್ಯುಬರ್ಗ್ ಸ್ಟ್ರಾಂಗ್ 168 180
ಯುಬಿ ಪ್ರಿಮೀಯಂ 131 143
ಯುಬಿ ಸ್ಟ್ರಾಂಗ್ 131 142