ಬೆಂಗಳೂರು:- ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳೋದ್ರಲ್ಲಿ ದರ್ಶನ್ ಮೊದಲಿಗರು. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಬಳಿಕ ಬಳ್ಳಾರಿ ಜೈಲಿಗೆ ದರ್ಶನ್ ರನ್ನು ಶಿಫ್ಟ್ ಮಾಡಲಾಗಿದೆ.
ಇನ್ನೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೂ ಒಂದಿಲ್ಲೊಂದು ಕಿರಿಕ್ ಮಾಡಿಕೊಳ್ಳುತ್ತಿದ್ದು, ಟಿವಿಗಾಗಿ ಜೈಲು ಹಾಗೂ ಜೈಲಾಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಇದೆಲ್ಲದರ ಪರಿಣಾಮ ಏನಾಗಲಿದೆ ಅನ್ನೊದು ದರ್ಶನ್ಗೆ ಅರಿವಿಲ್ಲ. ಹೀಗಾಗಿ ಈ ರೀತಿಯೆಲ್ಲ ಮಾಡಬೇಡಿ ಇದು ಕೊನೆಗೆ ನಿಮಗೆ ಮುಳುವಾಗುತ್ತದೆ ಎಂದು ದರ್ಶನ್ ಪರ ವಕೀಲರೇ ಹೇಳಬೇಕಾದ ಸ್ಥಿತಿ ಬಂದಿದೆ.
ದರ್ಶನ್ ಮಾಡಿಕೊಳ್ಳುವ ಒಂದೊಂದು ಕಿರಿಕ್ ಒಂದೊಂದು ಯಡವಟ್ಟು ಅವರ ಜಾಮೀನಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. ಅದನ್ನು ಅರಿತಿರುವ ದರ್ಶನ್ ಪರ ವಕೀಲರು ಈಗ ದರ್ಶನ್ಗೆ ನೀತಿ ಪಾಠ ಮಾಡಲು ಸಜ್ಜಾಗಿದ್ದಾರೆ. ಜೈಲಿನಲ್ಲಿ ಇಲ್ಲದ ಯಡವಟ್ಟುಗಳನ್ನ ಮಾಡಿಕೊಳ್ಳಬೇಡಿ. ಪದೇ ಪದೇ ಈ ರೀತಿಯಾಗಿ ಕಿರಿಕ್ ಮಾಡಿಕೊಂಡಲ್ಲಿ ಬೇಲ್ಗೆ ಸಮಸ್ಯೆಯಾಗುವುದರ ಜೊತೆಗೆ ಕಾನೂನು ಹೋರಾಟಕ್ಕೂ ತೊಡಕು ಉಂಟಾಗುತ್ತದೆ ಎಂದು ಹೇಳಿ ಪತ್ರ ಬರೆದು ಎಚ್ಚರಿಸಿದ್ದಾರೆ.
ಬಳ್ಳಾರಿಯ ಜೈಲಿಗೆ ಬಂದ ಪತ್ರವನ್ನು ಜೈಲು ಸಿಬ್ಬಂದಿ ಈಗಾಗಲೇ ದರ್ಶನ್ಗೆ ತಲುಪಿಸಿದ್ದಾರೆ.