ಬೆಂಗಳೂರು:- ಫ್ರೀಡಂ ಪಾರ್ಕಿನಲ್ಲಿ ಮೊದಲೇ ಮೂಲಸೌಕರ್ಯ ಇಲ್ಲದೇ ಕಂಗಾಲಾಗಿದ್ದ ಜನರಿಗೆ ಇದೀಗ ನಾಯಿ ಕಾಟ ಕೂಡ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಪ್ರತಿಭಟನೆಗೆ ಬರುವ ಜನರು ಫ್ರೀಡಂ ಪಾರ್ಕ್ ಒಳಗೆ ಎಂಟ್ರಿಯಾದರೆ ಸಾಕು, ಗುಂಪು ಗುಂಪಾಗಿ ಶ್ವಾನಪಡೆ ಅತ್ತ ಬರುತ್ತದೆ. ಇದಕ್ಕೆ ಹೆದರಿರುವ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
A pack of dogs camped in Freedom Park: Protesters are afraid of dogs!
ಇನ್ನು ಫ್ರೀಡಂ ಪಾರ್ಕ್ನ ಶಿಲ್ಪಕಲೆ ಗ್ಯಾಲರಿ ಬೀದಿನಾಯಿಗಳ ಅಡ್ಡೆಯಾಗಿದ್ದು, ಓಲ್ಡ್ ಸೆಂಟ್ರಲ್ ಜೈಲನ್ನ ನೋಡಲು ಬರುವ ಪ್ರವಾಸಿಗರಿಗೂ ಬೀದಿನಾಯಿಗಳ ಭಯ ಶುರುವಾಗಿದೆ. ಎಲ್ಲೆಂದರಲ್ಲಿ ಮಲಗಿ ನಿದ್ದೆ ಮಾಡುತ್ತಿರುವ ಶ್ವಾನಪಡೆ, ಪಾರ್ಕ್ ಸುತ್ತಮುತ್ತ ಯಾರಾದರೂ ಕಾಣಿಸಿಕೊಂಡ್ರೆ ಗ್ಯಾಂಗ್ ಕಟ್ಟಿಕೊಂಡು ಸುತ್ತುವರಿದು ಭಯಪಡಿಸುತ್ತಿವೆ. ಇದು ಜನರಿಗೆ ಓಡಾಡಲೂ ಭಯ ಹುಟ್ಟುವಂತೆ ಮಾಡಿದೆ. ಇತ್ತ ರಾಜಧಾನಿಯ ಬೀದಿನಾಯಿಗಳ ಕಾಟವನ್ನು ಕಂಡು ಸುಸ್ತಾದ ಜನರು ಬೀದಿನಾಯಿಗಳಿಗೆ ಬಿಬಿಎಂಪಿ ಕಡಿವಾಣ ಹಾಕಲಿ ಎಂದು ಆಗ್ರಹಿಸುತ್ತಿದ್ದಾರೆ.