ಹುಬ್ಬಳ್ಳಿ: ಬಹು ದಿನಗಳ ಬಹು ನಿರೀಕ್ಷಿತ ಬೇಡಿಕೆ ಈಗ ಈಡೇರಿದ್ದು, ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಾಯೋಗಿಕ ಚಾಲನೆ ದೊರೆತಿದ್ದು, ಪುಣೆಯಿಂದ ಪ್ರಯಾಣ ಆರಂಭಿಸಿದ ವಂದೇ ಭಾರತ್ ರೈಲು ಮಿರಜ್ ಜಂಕ್ಷನ್ ತಲುಪಿದ್ದು, ಅಲ್ಲಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಲಿದೆ.
ಈದ್ ಮಿಲಾದ್ ಆಚರಣೆ ವೇಳೆ ಗುಂಪು ಘರ್ಷಣೆ: ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಆಸ್ಪತ್ರೆಗೆ ದಾಖಲು!
ಸಾಕಷ್ಟು ವೈಭವದೊಂದಿಗೆ ಮೀರಜ್ಗೆ ಆಗಮಿಸಿದ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಅದ್ದೂರಿಯಾಗಿ ಸ್ಥಳೀಯರು ಹಾಗೂ ರೈಲ್ವೆ ಸಿಬ್ಬಂದಿ ಸ್ವಾಗತಿಸಿದ್ದಾರೆ. ಹೌದು.. ಮೀರಜ್ ರೈಲು ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲು, ನಿಲ್ದಾಣಕ್ಕೆ ರೈಲು ಬರ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಇಮ್ಮಡಿಗೊಂಡಿದೆ. ಮೋದಿ ಮೋದಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು. ಸಂಭ್ರಮಿಸಿದರು.
ಇನ್ನೂ ಮೀರಜ್ ನಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ ರೈಲು, 8 ಭೋಗಿ ಹೊಂದಿರುವ ವಂದೇ ಭಾರತ್ ರೈಲು, ಪುಣೆಯಿಂದ ವಾಯಾ ಮೀರಜ್ ಮಾರ್ಗವಾಗಿ ಬೆಳಗಾವಿ ಮೂಲಕ ಹುಬ್ಬಳ್ಳಿ ತಲುಪಲಿದೆ. ಇನ್ನೂ ನೈರುತ್ಯ ರೈಲ್ವೆ ವಲಯದಿಂದ ಅವ್ಯವಸ್ಥೆಯ ಆರೋಪ ಕೇಳಿ ಬಂದಿದ್ದು, ಮಾಧ್ಯಮದ ಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಮಯ, ನಿಲ್ದಾಣದಲ್ಲಿ ಯಾವ ಪ್ಲಾಟ್ ಫಾರಂ ಕಡೆ ಯಾವ ರೈಲು ಬರುತ್ತದೆ ಎಂಬ ಮಾಹಿತಿ ಕೊಡದ ಸಿಬ್ಬಂದಿಯ ನಡೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.