ನವದೆಹಲಿ: ಬಿಎಸ್ಎನ್ಎಲ್ ದೇಶದ ಜನಪ್ರಿಯ ಟೆಲಿಕಾಂ ಕಂಪನಿ ಆಗಿದೆ. ಕಳೆದ ಎರಡ್ಮೂರು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ಖಾಸಗಿ ಕಂಪನಿಗಳ ನಿದ್ದೆ ಕೆಡಿಸಿರುವ ಬಿಎಸ್ಎನ್ಎಲ್ ಕಂಪನಿಯು ತನ್ನ 5G ಸೇವೆಗಳನ್ನು ಹೊರತರಲು ತಯಾರಿ ನಡೆಸುತ್ತಿದೆ. ಶೀಘ್ರದಲ್ಲೇ ಬಳಕೆದಾರರು ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಬಿಎಸ್ಎನ್ಎಲ್ ಅಧಿಕೃತವಾಗಿ ತಿಳಿಸಿದೆ.
BSNL ಕಳೆದ ಕೆಲವು ತಿಂಗಳುಗಳಿಂದ ದೂರಸಂಪರ್ಕ ವಲಯದಲ್ಲಿ ಸುದ್ದಿ ಮಾಡುತ್ತಿದೆ. ರೀಚಾರ್ಜ್ ಯೋಜನೆಗಳಲ್ಲಿನ ಬದಲಾವಣೆಗಳಿಂದ 4G ನೆಟ್ವರ್ಕ್ ಸರಿಪಡಿಸುವವರೆಗೆ, ಈ ಸರ್ಕಾರಿ ಟೆಲಿಕಾಂ ಕಂಪನಿಯು ಈಗ ನಿಧಾನವಾಗಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗುತ್ತಿದೆ. ಬಳಕೆದಾರರಿಗೆ ಒಂದು ಪ್ರಮುಖ ಅಪ್ಡೇಟ್ ನೀಡಿದೆ. ಕಂಪನಿಯು ತನ್ನ 5G ಸೇವೆಗಳನ್ನು ಶೀಘ್ರದಲ್ಲೇ ಹೊರತರಲು ತಯಾರಿ ನಡೆಸುತ್ತಿದೆ.
ಕಾರಿನ ಸೀಟನ್ನು ಇಲಿ ಕಚ್ಚಿ-ಕಚ್ಚಿ ಚಿಂದಿ ಮಾಡಿದ್ಯಾ!? ಹಾಗಿದ್ರೆ ಮೊದಲು ಈ ಕೆಲಸ ಮಾಡಿ!
ಜನವರಿ 2025 ರಲ್ಲಿ 5G ಸೇವೆಯ ಪ್ರಾರಂಭ: ಬಿಎಸ್ಎನ್ಎಲ್ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಸುದ್ದಿಗೋಷ್ಠಿಯಲ್ಲಿ ಬಿಎಸ್ಎನ್ಎಲ್ ತನ್ನ 5ಜಿ ಸೇವೆಯನ್ನು ಜನವರಿ 2025 ರಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಘೋಷಿಸಿದ್ದಾರೆ. ಸಾಧ್ಯವಾದಷ್ಟು ಬೇಗ 5G ರೋಲ್ಔಟ್ಗೆ ಅನುಕೂಲವಾಗುವಂತೆ ತನ್ನ ಮೂಲಸೌಕರ್ಯವನ್ನು ಅಪ್ಡೇಟ್ ಮಾಡಲು ಕಂಪನಿಯು ಒತ್ತು ನೀಡುತ್ತಿದೆ. ಇದು ಟವರ್ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
4ಜಿ ಸೇವೆಯನ್ನು 5ಜಿಗೆ ಪರಿವರ್ತನೆ: BSNL 4G ಸೇವೆಯನ್ನು 5G ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಇದರರ್ಥ 5G ಸೇವೆಯನ್ನು ಪ್ರಾರಂಭಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. BSNL ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿದ ಪ್ರದೇಶಗಳಲ್ಲಿ 5G ರೋಲ್ಔಟ್ ಪ್ರಾರಂಭವಾಗುತ್ತದೆ. ಇದರ ನಂತರ ಅಪ್ಡೇಟ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಎಂದು ಬಿಎಸ್ಎನ್ಎಲ್ ಹೇಳಿದೆ.