ಬೆಂಗಳೂರು:- ಕೋಮುಗಲಭೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಸ್ವಚ್ಚತಾ ಆಂದೋಲನದಡಿ ನಡೆಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ತಾ.ಪಂ ಸರ್ವೇಶ್!
ಈ ಸಂಬಂಧ ಮಾತನಾಡಿದ ಅವರು,ನಾಗಮಂಗಲದ ಕೋಮುಗಲಭೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಘಟನೆ ಹಾಗೂ ಮಂಗಳೂರಿನ ಕೋಮುಗಲಭೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದರು.
ಇಷ್ಟು ಮುಸ್ಲಿಮರು ಪೆಟ್ರೋಲ್ ಬಾಂಬ್ ಎಲ್ಲಿಂದ ತಂದಿದ್ದಾರೆ? ಅದು ಮಸೀದಿಗಳಿಂದ ಬಂದಿದೆಯೇ ಎಂಬುದೂ ಸೇರಿದಂತೆ ಎಲ್ಲಾ ಸಂಗತಿಗಳನ್ನು ತನಿಖೆ ಮಾಡಬೇಕಿದೆ. ಇದಕ್ಕಾಗಿ ಈ ಎಲ್ಲಾ ಪ್ರಕರಣಗಳನ್ನು ಎನ್ಐಎಗೆ ವಹಿಸಬೇಕು. ನಾಗಮಂಗಲದ ಕೋಮುಗಲಭೆ ಪ್ರಕರಣದಲ್ಲಿ ಮೊದಲು ಹಿಂದೂಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಇದು ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ.
ಇದೇ ರೀತಿ ಮಂಗಳೂರಿನಲ್ಲೂ ಆಗಿದೆ. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಂಘಟನೆಗಳಿಗೆ ಹಾಗೂ ಭಯೋತ್ಪಾದಕರಿಗೆ ಯಾವುದೇ ಭಯವಿಲ್ಲ. ನಮ್ಮನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂಬ ಧೈರ್ಯದಿಂದ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶ ವಿರೋಧಿ ಶಕ್ತಿಗಳ ಜೊತೆ ಟೀ ಪಾರ್ಟಿ ಮಾಡುತ್ತಿದ್ದಾರೆ. ದೇಶ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಮತ್ತೆ ದೇಶ ವಿರೋಧಿ ಶಕ್ತಿಗಳು ತಲೆ ಎತ್ತಲು ಸಹಕಾರ ನೀಡುತ್ತಿದೆ. ಪ್ರಗತಿಪರರ ಮುಖವಾಡ ಹಾಕಿಕೊಂಡ ಸಾಹಿತಿಗಳು ಹಾಗೂ ನಗರ ನಕ್ಸಲರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇರ್ಯಾರೂ ಈ ಘಟನೆಗಳನ್ನು ಖಂಡಿಸುತ್ತಿಲ್ಲ. ಪ್ರತಿ ದಿನ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.